September 28, 2026
Monday, September 28, 2026
spot_img

ರೈಲು ತಡೆ ಪ್ರಕರಣ: ಕೋಡಿಹಳ್ಳಿ ಚಂದ್ರಶೇಖರಗೆ 14 ದಿನ ನ್ಯಾಯಾಂಗ ಬಂಧನ

ಹೊಸದಿಗಂತ ವರದಿ ಹುಬ್ಬಳ್ಳಿ:

ರೈಲು ತಡೆದು ಹೋರಾಟ ಮಾಡಿ ಪ್ರಕರಣಗಳಿಗೆ ಸಂಬಂಧಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರಿಗೆ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

2013 ಮತ್ತು 2019ರಲ್ಲಿ ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ರೈಲು ತಡೆದು ಹೋರಾಟ ಮಾಡಿದ ಸಂದರ್ಭದಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯ ವಾರಂಟ್ ನೀಡಿತ್ತು.

ಸೋಮವಾರ ಬೆಳಿಗ್ಗೆ ದಾಸನಕೊಪ್ಪದಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸಿದಾಗ ಆರ್ ಪಿಎಫ್ ನಿರೀಕ್ಷಕ ಬಿ.ಕೆ.ಪ್ರಕಾಶ ನೇತೃತ್ವದ ತಂಡ ಅವರನ್ನು ಬಂಧಿಸಿತ್ತು.

ಬಳಿಕ ಹುಬ್ಬಳ್ಳಿಯ ಒಂದನೇ ಸೆಷನ್ ಕೋಟ್೯ಗೆ ಹಾಜರು ಪಡಿಸಿದ್ದು, ಒಂದನೇ ಸೆಷನ್ ನ್ಯಾಯಾಲಯದ ನ್ಯಾಧೀಶರಾದ ಸಚಿನಕುಮಾರ ಶಿವಪೂಜಿ ೧೪ ದಿನ ನ್ಯಾಯಾಂಗ ಬಂಧನ ಒಳಪಡಿಸಿ ಆದೇಶಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ ಪರ ಜಾಕೀರ ತಟಗಾರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

Must Read