ಮಧುರೈನಲ್ಲಿ ರೈಲಿಗೆ ಬೆಂಕಿ ಅವಘಡ: 9 ಪ್ರಯಾಣಿಕರ ದುರ್ಮರಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲಕ್ಷ್ಮಣಪುರಿಯಿಂದ ರಾಮೇಶ್ವರಂಗೆ ತೆರಳುತ್ತಿದ್ದ ರೈಲಿನ ಒಂದು ಬೋಗಿಗೆ ಮಧುರೈನಲ್ಲಿ ಬೆಂಕಿ ಹೊತ್ತಿಕೊಂಡಿದೆ. ರೈಲಿನ ಒಂದು ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಈ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ. ಇದು ಪ್ರವಾಸಿಗರಿಗಾಗಿ ಇರುವ ವಿಶೇಷ ರೈಲು ಆಗಿತ್ತು. ಘಟನೆಯ ಕುರಿತು ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ. ಗ್ಯಾಸ್ ಸಿಲಿಂಡರ್ ನಿಂದಾಗಿಯೇ ಬೆಂಕಿ ಭುಗಿಲೆದ್ದಿತು ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here