ತೆಲಂಗಾಣದಲ್ಲಿ ತರಬೇತಿ ವಿಮಾನ ಪತನ: ಪೈಲಟ್, ತರಬೇತಿ ನಿರತ ಪೈಲಟ್ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತರಬೇತಿ ವಿಮಾನ ಪತನವಾಗಿ ಮಹಿಳಾ ಪೈಲಟ್ ಮತ್ತು ಟ್ರೈನಿ ಪೈಲಟ್ ಮೃತಪಟ್ಟಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ವಿಮಾನ ಪತನವಾಗಿದ್ದು, ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ನಾವು ಕೆಲಸ ಮಾಡುತ್ತಿದ್ದೆವು, ದೊಡ್ಡ ಶಬ್ದ ಕೇಳಿದೆ. ಏನಾಯಿತು ಎಂದು ನೋಡಲು ಹೋಗುವಷ್ಟರಲ್ಲಿ ದಟ್ಟ ಹೊಗೆ ಕಾಣಿಸಿತು. ಯಾರ ಜಮೀನಿಗಾದರೂ ಬೆಂಕಿ ಬಿದ್ದಿದೆಯಾ ಎಂದು ನೋಡಿದೆವು ಆದರೆ ಅಲ್ಲಿ ವಿಮಾನವೊಂದು ಹೊತ್ತಿ ಉರಿಯುತ್ತಿತ್ತು. ಯಾರೋ ಕೂಗಿದಂತೆಯೂ ಕೇಳಿತು, ಕೆಲವೇ ನಿಮಿಷದಲ್ಲಿ ಸದ್ದು ನಿಂತಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!