ಬಂಗಾಳದಲ್ಲಿ ರೈಲು ದುರಂತ: ಕೇಂದ್ರ ಸರಕಾರದ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ದುರಂತಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ರೈಲ್ವೆ ಇಲಾಖೆ ಹಾಗೂ ರೈಲುಗಳಲ್ಲಿ ಮೂಲ ಸೌಕರ್ಯಗಳನ್ನು ಕಡೆಗಣಿಸಿ, ವಂದೇ ಭಾರತ್‌ ರೈಲುಗಳ ಬಗ್ಗೆ ಮಾತ್ರ ಪಬ್ಲಿಸಿಟಿ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಕೇಂದ್ರ ಸರ್ಕಾರ ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಪ್ರಯಾಣಿಕರ ಮೂಲ ಸೌಕರ್ಯಗಳನ್ನು ನಿರ್ಲಕ್ಷಿಸುತ್ತಿದೆ. ಸ್ಲೀಪರ್‌ ಕೋಚ್‌ಗಳಲ್ಲಿ ರಾತ್ರಿ ಪ್ರಯಾಣಿಸುವವರಿಗೆ ಕಳಪೆ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಕೋಚ್‌ಗಳಲ್ಲಿ ಶೌಚಾಲಯಗಳಲ್ಲಿ ಶುಚಿತ್ವವೂ ಇರುವುದಿಲ್ಲ. ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ವಾಗ್ದಾಳಿ ನಡೆಸಿದರು.

ರೈಲ್ವೆ ಇಲಾಖೆ (Railway Department) ಈಗ ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿದೆ. ಬಜೆಟ್‌ ಕೊರತೆಯಿಂದ ಪೋಷಣೆ ಮಾಡುವವರೇ ಇಲ್ಲದಂತಾಗಿದೆ. ನಾನೂ ಈ ಹಿಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿರುವುದರಿಂದ ಅಲ್ಲಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಈಗಿನ ಸರ್ಕಾರ ರೈಲ್ವೆ ಅಧಿಕಾರಿಗಳು, ಎಂಜಿನಿಯರ್‌ಗಳು, ತಾಂತ್ರಿಕ ಸಿಬ್ಬಂದಿ, ಸುರಕ್ಷತಾ ಅಧಿಕಾರಿಗಳು ಮತ್ತು ಕಾರ್ಮಿಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ರೈಲ್ವೆ ಸಿಬ್ಬಂದಿಗೆ ನೀಡಲಾಗಿದ್ದ ಹಳೆಯ ಪಿಂಚಣಿ ವ್ಯವಸ್ಥೆಯನ್ನೂ ಹಿಂಪಡೆಯಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸರ್ಕಾರಕ್ಕೆ ಚುನಾವಣೆಯ ಬಗ್ಗೆ ಮಾತ್ರ ಕಾಳಜಿ ಇದೆ. ಹ್ಯಾಕ್​ ಮಾಡುವುದು ಹೇಗೆ, ಮ್ಯಾನಿಪ್ಯುಲೇಟ್​​​ ಮಾಡುವುದು ಹೇಗೆ, ಚುನಾವಣೆಗಳನ್ನು ರಿಗ್​ ಮಾಡುವುದು ಹೇಗೆ ಎಂಬುದರ ಮೇಲೆ ಗಮನವಿದೆ. ನನ್ನ ಪ್ರಕಾರ ಅವರು ಆಡಳಿತಕ್ಕೆ ಹೆಚ್ಚು ಸಮಯ ನೀಡಬೇಕೆ ಹೊರತು ವಾಕ್ಚಾತುರ್ಯಕ್ಕೆ ಅಲ್ಲ ಎಂದ ಹೇಳಿದರು.

ಈ ಹಿಂದೆ ರೈಲುಗಳ ಸುರಕ್ಷತೆಗಾಗಿ ನಮ್ಮ ಸರ್ಕಾರ ವ್ಯವಸ್ಥೆಗೊಳಿಸಿದ್ದ ಆಂಟಿ-ಕೊಲ್ಯೂಷನ್ ಸಾಧನವನ್ನು ಬಿಜೆಪಿ ʻಕವಚʼ ಎಂದು ಮರುನಾಮಕರಣ ಮಾಡಿದೆ. ಈ ವ್ಯವಸ್ಥೆಯು ಚಾಲಕ ನಿದ್ರಿಸುತ್ತಿದ್ದರೆ ಅಲಾರಂ ನಿಂದ ಎಚ್ಚರಿಸುತ್ತದೆ. ಎರಡೂ ರೈಲುಗಳು ಒಂದೇ ಟ್ರ್ಯಾಕ್‌ನಲ್ಲಿ ಬಂದರೆ ನಿಲ್ಲುತ್ತದೆ. ಬಿಜೆಪಿ ಇದನ್ನು ಮರುನಾಮಕರಣ ಮಾಡಿದರೂ ಪರವಾಗಿಲ್ಲ, ಆದ್ರೆ ಜನರಿಗೆ ಅದು ರಕ್ಷಾಕವಚವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!