ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಿಂದ ಜಮ್ಮು ಕಾಶ್ಮೀರದ ಬಾರಾಮುಲ್ಲಾವರೆಗೆ ನೇರ ರೈಲು ಸೇವೆ ಪ್ರಾರಂಭವಾಗಲಿದೆ. ಇದರಿಂದಾಗಿ ಇನ್ನು ಮುಂದೆ ಕಾಶ್ಮೀರದ ರಮಣೀಯ ಕಣಿವೆಗಳಿಗೆ ನಿಮ್ಮ ಪ್ರಯಾಣ ಸುಲಭವಾಗಲಿದೆ.
ಇಲ್ಲಿಯವರೆಗೆ, ದೆಹಲಿಯಿಂದ ಜಮ್ಮುವಿನ ಕತ್ರಾ ಎಂಬಲ್ಲಿಗೆ ರೈಲಿನ ಮೂಲಕ ಮತ್ತು ನಂತರ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಈಗ ಕತ್ರಾದಿಂದ ಸಂಗಲ್ಡನ್ ಎಂಬ ಸ್ಥಳದವರೆಗೆ ರೈಲು ವಿಭಾಗದ ಕಾಮಗಾರಿಗಳು ಪೂರ್ಣಗೊಂಡಿವೆ. ಅಷ್ಟೇ ಅಲ್ಲ,ರೈಲು ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲಾ ಸುರಕ್ಷತಾ ಪರಿಶೀಲನೆಗಳೂ ಮುಗಿದಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 19ರಂದು ಹೊಸ ರೈಲು ವಿಭಾಗವನ್ನು ಉದ್ಘಾಟಿಸಬಹುದು ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಯೋಜನೆ ಮುಗಿದ ಬಳಿಕ,ಸಾರ್ವಜನಿಕರು ದೆಹಲಿಯಿಂದ ಬಾರಾಮುಲ್ಲಾಗೆ ರೈಲಿನಲ್ಲಿ ಸುಲಭವಾಗಿ ಪ್ರಯಾಣಿಸಲು ಸಾಧ್ಯವಿದೆ. ಆದಾಗ್ಯೂ,ರೈಲು ಸಂಚಾರದ ವೇಳಾಪಟ್ಟಿ ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ) ಅಥವಾ ರೈಲ್ವೆ ಸಚಿವಾಲಯದಿಂದ ಹೊರಬಂದಿಲ್ಲ.
ಈ ರೈಲ್ವೆ ಮಾರ್ಗದಲ್ಲಿ ಐತಿಹಾಸಿಕ ಸೇತುವೆಗಳನ್ನು ಕಾಣಬಹುದು. ಅತ್ಯಾಧುನಿಕ ತಂತ್ರಜ್ಞಾನದ ದೃಷ್ಟಿಯಿಂದಲೂ ಇದು ಬಹಳ ವಿಶೇಷವಾಗಿವೆ. ಇಲ್ಲಿ ಚೆನಾಬ್ ಮತ್ತು ಅಂಜಿ ಎಂಬೆರಡು ಪ್ರಮುಖ ಸೇತುವೆಗಳಿವೆ.