ಹೊಸದಿಗಂತ ಡಿಜಿಟಲ್ ಡೆಸ್ಕ್
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ, ಮತ್ತು ಎಂಸಿಡಿ ಚುನಾವಣೆಯ ಕಣದಲ್ಲಿದ್ದ ಏಕೈಕ ಮಂಗಳಮುಖಿ ಅಭ್ಯರ್ಥಿ ಬೋಬಿ ಕಿನ್ನರ್ ಬುಧವಾರ ಸುಲ್ತಾನ್‌ಪುರಿ-ಎ ವಾರ್ಡ್‌ನಿಂದ ಗೆದ್ದಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಬೋಬಿ ಅವರು ಕಾಂಗ್ರೆಸ್ ಅಭ್ಯರ್ಥಿ ವರುಣಾ ಢಾಕಾ ಅವರನ್ನು 6,714 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಚುನಾವನೆಯಲ್ಲಿ ಆಯ್ಕೆಯಾದರೆ ತನ್ನ ಕ್ಷೇತ್ರವನ್ನು ಸುಂದರಗೊಳಿಸಲು ಶ್ರಮಿಸುವುದಾಗಿ ಮತ್ತು ಜನರ ಜೀವನವನ್ನು ಸುಧಾರಿಸಲು ಕ್ರಮವಹಿಸುವುದಾಗಿ ಬೋಬಿ ಹೇಳಿದ್ದರು.
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಯಿಂದ ಭ್ರಷ್ಟಾಚಾರವನ್ನು ತೊಡೆದುಹಾಕಲು ತಾನು ಕೆಲಸ ಮಾಡುತ್ತೇನೆ ಎಂದು ಬೋಬಿ ಭರವಸೆ ನೀಡಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ