ಹೊಸದಿಗಂತ ವರದಿ,ಕಲಬುರಗಿ:
ಸ್ನೇಹಿತನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬೈಕ್ ಮೇಲೆ ತೆರಳುತ್ತಿದ್ದ ಸಂದರ್ಭದಲ್ಲಿ ಸಾರಿಗೆ ಬಸ್ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಬಳಿ ನಡೆದಿದೆ.
ಶಶಿಕುಮಾರ್ (೨೧), ಹಾಗೂ ಪ್ರಜ್ವಲ್ (೨೨) ಎಂಬುವವರೇ ಮೃತಪಟ್ಟ ಬೈಕ್ ಸವಾರರಿಬ್ಬರು. ಯಾದಗಿರಿ ಜಿಲ್ಲೆಯ ಶಹಾಪುರ ಮೂಲದ ಬೈಕ್ ಸವಾರರಾಗಿದ್ದು, ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.