ಹೊಸದಿಗಂತ ವರದಿ ಮಂಡ್ಯ:
ಲಾರಿಗೆ ಸಾರಿಗೆ ಬಸ್ಸು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಸಿದ್ದಯ್ಯನಕೊಪ್ಪಲು ಗೇಟ್ ಬಳಿ ನಡೆದಿದೆ.
ಸವಿತಾ (೪೫),ಸ್ಪೂರ್ತಿ (೨೩), ಕೇಶವ ರೆಡ್ಡಿ (೨೩), ಧನರಾಜ್ (೬೩), ನಾಗಮಣಿ (೫೪), ಲಕ್ಷ್ಮಿ ದೇವಮ್ಮ (೭೫), ಶಿವಮ್ಮ (೪೦), ಶಶಿಕಲಾ (೬೫), ಆಶಾ (೫೮), ನಾಗಮ್ಮ (೬೩), ಮೀನಾಕ್ಷಿ (೪೦), ಶಶಿಕಾಂತ್ (೬೩), ಮಂಗಳಗೌರಿ (೪೨), ತರುಣ ಮಹೇಶ್ವರಿ (೪), ಕೆಂಪಾಜಮ್ಮ , ದೇವಮ್ಮ (೫೦), ಮೃತ್ಯಂಜಯ (೫೮), ಚನ್ನಬಸವ (೬೫), ದಿನೇಶ್ಕುಮಾರ್ (೪೦) ಸೇರಿದಂತೆ ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡವರಾಗಿದ್ದಾರೆ.
ಮಂಡ್ಯ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ಸು ಮುಂದೆ ಹೋಗುತ್ತಿದ್ದ ಲಾರಿ ಚಾಲಕ ದಿಢೀರ್ ಬ್ರೇಕ್ ಹಾಕಿದಾಗ ಹಿಂದಿನಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಠಾಣೆ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಎಲ್ಲರನ್ನೂ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೆಲವರಿಗೆ ಕೈ, ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.