Thursday, November 20, 2025

ಮತ್ತೆ ನಾಳೆಯಿಂದ ಮುಷ್ಕರಕ್ಕೆ ಸಜ್ಜಾದ ಸಾರಿಗೆ ನೌಕರರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವಿಧ ಬೇಡಿಕೆಗಳ ಈಡರಿಕೆಗೆ ಆಗ್ರಹಿಸಿ ಆಗಸ್ಟ್ ನಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಮುಷ್ಕರ ಕೈಬಿಟ್ಟಿದ್ದರು. ಆದರೆ, ಇದೀಗ ಮತ್ತೆ ನಾಳೆಯಿಂದ (ಅಕ್ಟೋಬರ್ 15) ಮುಷ್ಕರಕ್ಕೆ ಸಜ್ಜಾಗಿದ್ದಾರೆ.

ಆಗಸ್ಟ್ 5ರಂದು ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಅದ್ರೆ, ಹೈಕೋರ್ಟ್ ಮುಷ್ಕರ ಮುಂದೂಡುವಂತೆ ಸೂಚಿಸಿತ್ತು. ಇದರಿಂದ ಮುಷ್ಕರ ಕೈಬಿಟ್ಟಿದ್ದರು. ಆದರೂ ಇಲ್ಲಿಯವರೆಗೂ ಸರ್ಕಾರ ಯಾವುದೇ ಬೇಡಿಕೆ ಈಡೇರಿಸಲು ಕ್ರಮಕೈಗೊಂಡಿಲ್ಲವೆಂದು ಆಕ್ರೋಶಗೊಂಡಿರುವ ಸಾರಿಗೆ ನೌಕರರು ಮತ್ತೆ ನಾಳೆಯಿಂದ (ಅಕ್ಟೋಬರ್ 14) ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಬಂದ್ ಮಾಡಿ ಬೆಂಗಳೂರು,ಹುಬ್ಬಳಿ, ಹಾಗೂ ಕಲುಬುರಗಿಯಲ್ಲಿ ಸಾರಿಗೆ ನೌಕರರಿಂದ ಐದು ದಿನ ಉಪವಾಸ ಸತ್ಯಾಗ್ರಹ ನಡೆಸಲು ಸಜ್ಜಾಗಿದ್ದಾರೆ.ಇದರಿಂದ ದೀಪಾವಳಿ ಹಬ್ಬದ ನಡುವೆಯೇ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.

ನಾಳೆಯಿಂದ 5 ದಿನ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಹಿನ್ನೆಲೆಯಲ್ಲಿ ಸಾರಿಗೆ ನೌಕರರಿಗೆ ರಜೆ ರದ್ದು ಮಾಡಲಾಗಿದೆ. ನಾಳೆಯಿಂದ (ಅಕ್ಟೋಬರ್ 14) ಐದು ದಿನಗಳ ವರೆಗೆ ನೌಕರರ ರಜೆ ಕ್ಯಾನ್ಸಲ್ ಮಾಡಿ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ.

ಸಾರಿಗೆ ಸಂಸ್ಥೆ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ. ಹೀಗಾಗಿ ಜನರಿಗೆ ಸಮರ್ಪಕ ಸೇವೆ ಓದಗಿಸೋದು ನಿಗಮದ ಕರ್ತವ್ಯ. ನಾಳೆಯಿಂದ ಅ.19ರವರೆಗೆ ಉಪವಾಸ ಸತ್ಯಾಗ್ರಹದ ಅವಧಿಯಲ್ಲಿ ಸಾರಿಗೆ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಬಾರದು ಅನಿವಾರ್ಯ ಸಂದರ್ಭ ಹೊರತುಪಡಿಸಿ ಯಾರಿಗೂ ರಜೆಯಿಲ್ಲ ಎಂದು ನೋ ವರ್ಕ್, ನೋ ಪೇ ನಿಯಮ ಜಾರಿಗೊಳಿಸಿ ಆದೇಶಿಸಿದೆ.

error: Content is protected !!