October 18, 2026
Sunday, October 18, 2026
spot_img

ಯಾದಗಿರಿಯಲ್ಲಿ ಹೊಟೇಲ್‌ಗಳ ಮೇಲೆ ದಿಢೀರ್‌ ದಾಳಿ, ಅಕ್ರಮವಾಗಿ ಸ್ಟಾಕ್‌ ಮಾಡಿದ್ದ ಸಿಲಿಂಡರ್‌ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಾದಗಿರಿಯ ಹೊಟೇಲ್‌ ಒಂದರ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದಾರೆ.

ಗ್ಯಾಸ್‌ ಸಿಗದಿದ್ದರೆ ಎನ್ನುವ ಭಯಕ್ಕೆ ಎಲ್​ಪಿಜಿ ಸಿಲಿಂಡರ್‌ಗಳನ್ನು ಯಾವುದೇ ಸೇಫ್ಟಿ ಇಲ್ಲದೆ ಇರಿಸಲಾಗಿತ್ತು.

ನಗರದ ವಿವಿಧ ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಒಟ್ಟು 46 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ಗೃಹಬಳಕೆಗೆ ಮೀಸಲಾದ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಬಳಸುತ್ತಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಥ ಅಕ್ರಮಗಳ ವಿರುದ್ಧ ಇದೀಗ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.

Must Read