ಪೆಟ್ರೋಲ್ ತುಂಬಿದ ಬ್ಯಾರಲ್‌ ಗಳ ಸಾಗಾಟ: ಪೊಲೀಸರಿಂದ ಲಾರಿ ವಶ

 ಹೊಸದಿಗಂತ ವರದಿ,ಚಿಕ್ಕಮಗಳೂರು:

ಪೆಟ್ರೋಲ್ ತುಂಬಿದ ಬ್ಯಾರಲ್‌ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಮೂಡಿಗೆರೆ ತಾಲ್ಲೂಕಿನ ಹಿರೇಶಿಗರ ಗ್ರಾಮದ ಬಳಿ ಪತ್ತೆಯಾಗಿದ್ದು, ಪೊಲೀಸರು ಲಾರಿ ವಶಪಡಿಸಿಕೊಂಡು ವಾರಸುದಾರರ ಪತ್ತೆಗೆ ಬಲೆ ಬೀಸಿದ್ದಾರೆ.

ಲಾರಿಯಲ್ಲಿ ಸುಮಾರು ೨ ಸಾವಿರ ಲೀಟರ್ ಪೆಟ್ರೋಲ್ ಪತ್ತೆಯಾಗಿದೆ. ಪೈಪ್‌ಲೈನ್‌ನ್ನು ಕೊರೆದು ಪೆಟ್ರೋಲ್ ಕಳವು ಮಾಡಿ ಸಾಗಿಸುವಾಗ ಸಿಕ್ಕಿ ಬೀಳುವ ಭಯದಿಂದ ಚಾಲಕ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಲಾರಿಗೆ ನಂಬರ್ ಪ್ಲೇಟ್ ಸಹ ಇಲ್ಲದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಎಲ್ಲೂ ಪೆಟ್ರೋಲ್ ಪೈಪ್ ಲೈನ್ ಕೊರೆದಿರುವುದು ಕಂಡುಬಂದಿಲ್ಲ. ಬೇರೆ ಕಡೆ ಪೈಪ್ ಕೊರೆದು ಪೆಟ್ರೋಲ್ ಕದ್ದು ಸಾಗಿಸುತ್ತಿರಬಹುದೆಂಬ ಅನುಮಾನ ಮೂಡಿದೆ. ಲಾರಿಯನ್ನು ಗೋಣಿಬೀಡು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!