ವಾಹನ ಸಾಮರ್ಥ್ಯ ಮೀರಿ ಶಾಲಾ ಮಕ್ಕಳ ಸಾಗಾಟ, 994 ಚಾಲಕರ ವಿರುದ್ಧ ಬಿತ್ತು ಕೇಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಿನಲ್ಲಿ ವಾಹನ ಸಾಮರ್ಥ್ಯ ಮೀರಿ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ 994 ಚಾಲಕರ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನವೆಂಬರ್ 22ರಂದು ನಗರದಾದ್ಯಂತ ವಿಶೇಷ ಅಭಿಯಾನ ನಡೆಸಿದ ಸಂಚಾರಿ ಪೊಲೀಸರು, ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆರೋಪದ ಮೇಲೆ ವಿವಿಧ ವಾಹನಗಳ ಚಾಲಕರ ಮೇಲೆ ದೂರು ದಾಖಲು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹೆಚ್ಚಿನ ದೂರುಗಳು ಹರಿದು ಬಂದ ಹಿನ್ನೆಲೆಯಲ್ಲಿ ಫೀಲ್ಡಿಗಿಳಿದ ಸಂಚಾರಿ ಪೊಲೀಸರು, ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ 319 ಬಸ್‌, 122 ಆಟೋರಿಕ್ಷಾ, 133 ಮಿನಿವ್ಯಾನ್‌, 332 ವ್ಯಾನ್‌ಗಳು ಮತ್ತು 89 ಇತರ ವಾಹನಗಳು ಸೇರಿದಂತೆ ಒಟ್ಟು 2,050 ವಾಹನಗಳನ್ನು ತಪಾಸಣೆ ನಡೆಸಿ ಕ್ರಮ ಕೈಗೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!