ಆಧುನಿಕ ನಗರಜೀವನದಿಂದ ಸ್ವಲ್ಪ ಕಾಲ ವಿರಾಮ ಪಡೆದು, ಶಾಂತಿಯುತ ಪರಿಸರದಲ್ಲಿ ನೆಮ್ಮದಿಯಿಂದ ಕಾಲ ಕಳೆಯಲು ಹಿಲ್ಲ್ ಸ್ಟೇಶನ್‌ಗಳು ಅತ್ಯುತ್ತಮ ಆಯ್ಕೆ. ಭಾರತದಲ್ಲಿ ಅನೇಕ ಹಿಲ್ಲ್ ಸ್ಟೇಶನ್‌ಗಳು ಇರುವುದಾದರೂ, ಹೆಚ್ಚು ಜನ ಸಂದಣಿ ಇರುತ್ತೆ. ಇವತ್ತು ನಾವು ಹೆಚ್ಚು ಜನಸಂದಣಿಯಿಂದ ದೂರವಿದ್ದು, ನೈಸರ್ಗಿಕ ಶಾಂತಿ ಮತ್ತು ಸೌಂದರ್ಯವನ್ನು ಅನುಭವಿಸಲು ಉತ್ತಮ ಸ್ಥಳಗಳ ಬಗ್ಗೆ ಹೇಳ್ತೇವೆ.
ತವಾಂಗ್, ಅರುಣಾಚಲ ಪ್ರದೇಶ:
ತವಾಂಗ್‌ನ್ನ. ಶಾಂತಿ, ನೆಮ್ಮದಿ ಮತ್ತೆ ಆಧ್ಯಾತ್ಮಿಕತೆ ಬಯಸೋರಿಗೆ ಇದು ಹೇಳಿ ಮಾಡಿಸಿದ ಜಾಗ! ಇಲ್ಲಿರೋ ಟಿಬೆಟಿಯನ್ ಬೌದ್ಧ ಮಠಗಳು ತುಂಬಾನೇ ಫೇಮಸ್. ಅದ್ರಲ್ಲೂ ತವಾಂಗ್ ಮಠ ಭಾರತದಲ್ಲೇ ಅತಿ ದೊಡ್ಡದು.
ಮುನ್ಸಿಯಾರಿ, ಉತ್ತರಾಖಂಡ:
ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿರೋ ಈ ಪುಟ್ಟ ಪಟ್ಟಣ ಪಂಚಚುಲಿ ಬೆಟ್ಟಗಳ ಹಿಮದಿಂದ ಆವೃತವಾದ ಶಿಖರಗಳ ಅದ್ಭುತ ನೋಟವನ್ನ ನೀಡುತ್ತೆ. ಸಾಹಸ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗ. ಟ್ರೆಕ್ಕಿಂಗ್, ಬರ್ಡ್ ವಾಚಿಂಗ್ ಮತ್ತೆ ಪ್ರಕೃತಿ ನಡಿಗೆಗೆ ಇದು ಸೂಕ್ತವಾದ ತಾಣ.
ಚೋಪ್ಟಾ, ಉತ್ತರಾಖಂಡ:
ಗರ್ವಾಲ್ ಹಿಮಾಲಯದಲ್ಲಿರೋ ಈ ಪುಟ್ಟ ಪಟ್ಟಣ ಸುತ್ತಲೂ ಹಿಮದಿಂದ ಆವೃತವಾದ ಬೆಟ್ಟಗಳು ಮತ್ತೆ ಹಸಿರು ಹುಲ್ಲುಗಾವಲುಗಳಿಂದ ತುಂಬಿದೆ. ತುಂಗನಾಥ ಮತ್ತು ಚಂದ್ರಶಿಲಾ ಟ್ರೆಕ್ ಇದರ ಪ್ರಮುಖ ಆಕರ್ಷಣೆ.
ಜುಲುಕ್ ಸಿಕ್ಕಿಂ
ಸಿಕ್ಕಿಂನ ಪೂರ್ವ ಭಾಗದಲ್ಲಿರುವ ಜಿಲುಕ್ ಒಂದು ಸಣ್ಣ ಹಳ್ಳಿಯಾಗಿದ್ದು, ಹಿಮಪರ್ವತಗಳು ಮತ್ತು ಅದ್ಭುತ ರಸ್ತೆ ಗಳನ್ನು ಹೊಂದಿದ್ದು, ಫೋಟೋಗ್ರಾಫರ್ಸ್ ಗಳಿಗೆ ಬೆಸ್ಟ್ ಪ್ಲೇಸ್