Travel | ನೀವು ಪರಿಸರ ಪ್ರೇಮಿಗಳ? ಹಾಗಿದ್ರೆ ನೋಡ್ಲೆಬೇಕಾದ ಭಾರತದ 6 ಅದ್ಭುತ ತಾಣಗಳಿವು!

ನೀವು ಪರಿಸರ ಪ್ರೇಮಿಗಳ? ಈ ಮಳೆಗಾಲದಲ್ಲಿ ನಯನ ಮನೋಹರವಾದ ನೈಸರ್ಗಿಕ ಸೌಂದರ್ಯವನ್ನು ಆನಂದಿಸಬೇಕೆಂದು ಕನಸು ಕಾಣುತ್ತೀದ್ದೀರಾ? ಹಾಗಿದ್ರೆ ಈ ಲೇಖನ ನಿಮಗಾಗಿ. ಪರಿಸರ ಸ್ನೇಹಿ ಪ್ರವಾಸೋದ್ಯಮವು ಇತ್ತೀಚೆಗೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದು ಪ್ರಪಂಚದ ಪರಿಸರೀಯ ಸಮತೋಲನವನ್ನು ಕಾಪಾಡುತ್ತಲೇ ಪ್ರವಾಸಿ ತಾಣಗಳ ಸೌಂದರ್ಯವನ್ನು ಅನುಭವಿಸುವ ಎರಡು ಗುರಿಗಳನ್ನು ಪೂರೈಸುತ್ತದೆ. ಭಾರತದಲ್ಲಿ ಹಲವಾರು ಇಂತಹ ತಾಣಗಳಿವೆ, ಅಲ್ಲಿ ನೀವು ಪ್ರಕೃತಿಯ ನಡುವೆ ಶಾಂತಿಯುತ ಸಮಯವನ್ನು ಕಳೆಯಬಹುದು.

Mawlynnong: Visit The Cleanest Asian Village - The Hospitality Daily

ಕಬಿನಿ, ಕರ್ನಾಟಕ
ಕಬಿನಿ ನದಿ ದಡದ ಬೈಸನ್ ರೆಸಾರ್ಟ್, ನಡಿಗೆ ಸಫಾರಿ, ನೈಸರ್ಗಿಕ ತಜ್ಞರು ಕಾಡಿನ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಸ್ಥಳೀಯ ಸಸ್ಯಗಳು ಮತ್ತು ಪ್ರಾಣಿಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತಾರೆ. ಮತ್ತು ಹೈಡಿಂಗ್ ವೀಕ್ಷಣೆಗಳು ಬಹುಜನಪ್ರಿಯ.

ಕಬಿನಿ - ಅದ್ಭುತ ಭೂದೃಶ್ಯಗಳು ಮತ್ತು ವನ್ಯಜೀವಿ - ಕರ್ನಾಟಕ ಪ್ರವಾಸೋದ್ಯಮ

ಚಿಚಾಮ್, ಹಿಮಾಚಲ ಪ್ರದೇಶ
14,500 ಅಡಿ ಎತ್ತರದ ಈ ಹಳ್ಳಿ, ಹಿಮಚಿರತೆ ಹಾಗೂ ಅಪರೂಪದ ಬೆಕ್ಕು ವೀಕ್ಷಣೆಗೆ ಪ್ರಸಿದ್ಧ. ಸ್ಥಳೀಯ ಹೋಮ್‌ಸ್ಟೇ ಅನುಭವವೂ ಲಭ್ಯವಿದೆ.

PREMIUM SPITI VALLEY Itinerary

ತಡೋಬಾ, ಮಹಾರಾಷ್ಟ್ರ
ಹುಲಿ ಮೀಸಲು ಪ್ರದೇಶ, ಪರಿಸರ ಸ್ನೇಹಿ ವಸತಿ, ಬುಡಕಟ್ಟು ಸಂಸ್ಕೃತಿಯ ಪರಿಚಯ, ಸಫಾರಿ, ಪಕ್ಷಿ ವೀಕ್ಷಣೆ. ಈ ಉದ್ಯಾನವನವು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಲವಾರು ಪರಿಸರ ಸ್ನೇಹಿ ವಸತಿ ಆಯ್ಕೆಗಳನ್ನು ನೀಡುತ್ತದೆ.

Tadoba Forest | Incredible India

ಮುನ್ಸಿಯಾರಿ, ಉತ್ತರಾಖಂಡ್
ಪಂಚಚೂಲಿ ಶಿಖರ ದರ್ಶನ, ಚಾರಣ ಮಾರ್ಗಗಳು, ಶಿಬಿರ ಪ್ರವಾಸ, ಸ್ಥಳೀಯ ಹೋಮ್‌ಸ್ಟೇ ಆಯ್ಕೆಗಳು. ಇಲ್ಲಿ ನೀವು ವರ್ಷಪೂರ್ತಿ ಪಂಚಚೂಲಿ ಶಿಖರಗಳ ಬೆರಗುಗೊಳಿಸುವ ದೃಶ್ಯಗಳನ್ನು ಆನಂದಿಸಬಹುದು!

ಮುನ್ಸಿಯಾರಿ ಉತ್ತರಾಖಂಡದಲ್ಲಿ ಮಾಡಬೇಕಾದ ಅತ್ಯುತ್ತಮ ಕೆಲಸಗಳು -

ಮಾವ್ಲಿನ್ನಾಂಗ್, ಮೇಘಾಲಯ
ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ, ಜೀವಂತ ಬೇರು ಸೇತುವೆಗಳು, ಜೀವವೈವಿಧ್ಯ ಕಾಪಾಡುವ ಉದ್ಯಾನ. ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಲವಾರು ಪರಿಸರ ಸ್ನೇಹಿ ವಸತಿಗಳನ್ನು ಈ ರಾಜ್ಯವು ನೀಡುತ್ತದೆ. ಪ್ರವಾಸಿಗರು ಜೀವವೈವಿಧ್ಯತೆಗೆ ಹೆಸರುವಾಸಿಯಾದ ನೊಕ್ರೆಕ್ ರಾಷ್ಟ್ರೀಯ ಉದ್ಯಾನವನ್ನು ನೋಡಬಹುದು.

3 ದಿನಗಳು 2 ರಾತ್ರಿಗಳು ಶಿಲ್ಲಾಂಗ್ ಮಾವ್ಲಿನ್ನಾಂಗ್ ಪ್ರವಾಸ - ಟ್ರಾವೆಂಜೊ

ತೀರ್ಥನ್ ಕಣಿವೆ, ಹಿಮಾಚಲ
ಮೀನುಗಾರಿಕೆ, ನದಿ ವೀಕ್ಷಣೆ, ಪರ್ವತ ನಡಿಗೆ, 1500 ವರ್ಷಗಳ ಚಹ್ನಿ ಕೋಟೆ ಇದೆ. ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ತೀರ್ಥನ್ ಕಣಿವೆಯನ್ನು ವರ್ಷಪೂರ್ತಿ ಪ್ರವಾಸಿಗರು ಭೇಟಿ ನೀಡಬಹುದು. ಈ ರಾಷ್ಟ್ರೀಯ ಉದ್ಯಾನವನವು ಕಂದು ಮತ್ತು ಕಾಮನಬಿಲ್ಲು ಟ್ರೌಟ್ ಮೀನುಗಳಿಗೆ ಹೆಸರುವಾಸಿಯಾಗಿದೆ.

ತೀರ್ಥನ್ ಕಣಿವೆ ಹಿಮಾಚಲ ಪ್ರದೇಶ | ಭಾರತದ ಐಷಾರಾಮಿ ಹಾದಿಗಳು

ಪರಿಸರವನ್ನು ಕಾಪಾಡುತ್ತಲೇ ಪ್ರವಾಸ ಮಾಡಲು ಬಯಸುವವರಿಗೆ ಈ ತಾಣಗಳು ಪರಿಪೂರ್ಣ ಆಯ್ಕೆ. ಸುಸ್ಥಿರ ಜೀವನ ಶೈಲಿಯನ್ನು ಅನುಸರಿಸುವ ಮೂಲಕ ನಿಸರ್ಗಕ್ಕೂ ನಾವು ಹೊಣೆಗಾರರಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!