ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಪೂರ್ವ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ಹರಡಿರುವ ಸುಂದರ ಪ್ರವಾಸಿ ತಾಣ. ಸ್ಫಟಿಕದಂತಹ ಕಡಲ ನೀರು, ಅದ್ಭುತ ಬೀಚ್‌ಗಳು, ಮನಸೂರೆಗೊಳಿಸುವ ಪ್ರಾಕೃತಿಕ ಸಂಪತ್ತು ಮತ್ತು ಐತಿಹಾಸಿಕ ನೆನೆಪಿನಿಂದ ತುಂಬಿರುವ ಈ ದ್ವೀಪ ಅದೆಷ್ಟೋ ಪ್ರವಾಸಿಗರ ಬಕೆಟ್ ಲಿಸ್ಟ್ ನಲ್ಲಿದೆ.
ಹೋಗೋದು ಹೇಗೆ?
ಅಂಡಮಾನ್ ದ್ವೀಪಗಳ ಪ್ರಮುಖ ಪ್ರವೇಶ ದ್ವಾರ ಪೋರ್ಟ್ ಬ್ಲೇರ್. ಇಲ್ಲಿ ವಿಮಾನ ಸೇವೆಗಳು ಭಾರತದ ಪ್ರಮುಖ ನಗರಗಳಿಂದ (ಚೆನ್ನೈ, ಕೋಲ್ಕತ್ತಾ, ಬೆಂಗಳೂರು) ಲಭ್ಯವಿದೆ. ಪೋರ್ಟ್ ಬ್ಲೇರ್‌ಗೆ ಶಿಪ್ ಮೂಲಕವೂ ಹೋಗಬಹುದು.
ವೀಸಾ/ಪರ್ಮಿಟ್: ಭಾರತೀಯರಿಗೆ ವಿಶೇಷ ಅನುಮತಿ ಬೇಕಿಲ್ಲ. ಆದರೆ ವಿದೇಶಿಗರಿಗೆ RAP (Restricted Area Permit) ಅಗತ್ಯವಿದೆ.
ಪ್ರವಾಸಿ ಸ್ಥಳಗಳು
ಸೆಲ್ಯುಲರ್ ಜೈಲ್ (Cellular Jail): ಭಾರತ ಸ್ವತಂತ್ರ ಹೋರಾಟಕ್ಕೆ ಸಾಕ್ಷಿಯಾಗಿರುವ ಐತಿಹಾಸಿಕ ಜೈಲು. ರಾತ್ರಿ ಲೈಟ್ & ಸೌಂಡ್ ಶೋ ಖಂಡಿತ ನೋಡಲೇಬೇಕು.
ರೋಸ್ ಐಲ್ಯಾಂಡ್ (Ross Island): ಬ್ರಿಟಿಷರ ಕಾಲದ ಆಳ್ವಿಕೆಗಳ ನೆನಪಿನ ಅವಶೇಷಗಳು ಇಲ್ಲಿ ಉಳಿದಿವೆ.
ಹೇವ್‌ಲಾಕ್ ದ್ವೀಪ (Havelock Island): ಈ ದ್ವೀಪದ ರಾಧಾನಗರ ಬೀಚ್ ವಿಶ್ವದ ಅತ್ಯುತ್ತಮ ಕಡಲತೀರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಸ್ಕೂಬಾ ಡೈವಿಂಗ್, ಸ್ನೋರ್ಕೆಲಿಂಗ್‌ಗಾಗಿಸೂಕ್ತ ಸ್ಥಳ.
ನೀಲ್ ದ್ವೀಪ: ಪ್ರಕೃತಿಯ ಸೌಂದರ್ಯ ಮತ್ತು ಶಾಂತತೆಯನ್ನು ಅನುಭವಿಸಲು ಸೂಕ್ತ ತಾಣ.
ಋತುಮಾನ ಮತ್ತು ಪ್ರಯಾಣಕ್ಕೆ ಸೂಕ್ತ ಸಮಯ
ಅಕ್ಟೋಬರ್‌ನಿಂದ ಮೇವರೆಗೆ ಅಂಡಮಾನ್ ಪ್ರವಾಸಕ್ಕೆ ಅತ್ಯುತ್ತಮ ಕಾಲ. ಈ ಸಮಯದಲ್ಲಿ ಹವಾಮಾನ ಸುಂದರವಾಗಿದ್ದು, ಬೀಚ್ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಜೂನ್-ಸೆಪ್ಟೆಂಬರ್ ಮಳೆಗಾಲದ ಹೊತ್ತಿನಲ್ಲಿ ಕಡಿಮೆ ಪ್ರವಾಸಿಗರು ಬರುವುದು, ಆದರೆ ಕೆಲವು ಚಟುವಟಿಕೆಗಳು ಲಭ್ಯವಿರದಿರಬಹುದು.
ಪ್ರಮುಖ ಚಟುವಟಿಕೆಗಳು
ಸ್ಕೂಬಾ ಡೈವಿಂಗ್: ನೀಲಂಗಿ ಸಮುದ್ರದಲ್ಲಿ ಮೀನುಗಳೊಂದಿಗೆ ಈಜುವುದು ನಿಮ್ಮ ಜಿವನದಲ್ಲಿಯೇ ಮರೆಯಲಾಗದ ಅನುಭವವಾಗುತ್ತದೆ.
ಸ್ನೋರ್ಕೆಲಿಂಗ್: ನೀರಿನ ಮೇಲ್ಭಾಗದಲ್ಲೇ ಮೀನುಗಳನ್ನು ನೋಡುವ ಚಟುವಟಿಕೆ.
ಗ್ಲಾಸ್ ಬೋಟಿಂಗ್, ಟ್ರೆಕ್ಕಿಂಗ್, ಮ್ಯಾಂಗ್ರೂವ್ ಬೋಟ್ ಸಫಾರಿ ಇವು ಸಹ ಪ್ರಕೃತಿ ಪ್ರಿಯರಿಗೆ ಉತ್ತಮ.
ಸಲಹೆಗಳು
ಮೊಬೈಲ್ ನೆಟ್ವರ್ಕ್: ಕೆಲವು ದ್ವೀಪಗಳಲ್ಲಿ ನೆಟ್ವರ್ಕ್ ಸಮಸ್ಯೆ ಬರಬಹುದು.
ATM & ಹಣದ ವ್ಯವಸ್ಥೆ: ಪೋರ್ಟ್ ಬ್ಲೇರ್ ಹೊರತುಪಡಿಸಿ ಹೆಚ್ಚು ಎಟಿಎಂಗಳು ಇರುವುದಿಲ್ಲ. ಹಗಲು ಸಮಯದಲ್ಲಿ ನಗದು ಇಟ್ಟುಕೊಳ್ಳಿ.
ಪ್ಲಾಸ್ಟಿಕ್ ನಿರ್ಬಂಧ: ಹಲವಾರು ದ್ವೀಪಗಳಲ್ಲಿ ಪ್ಲಾಸ್ಟಿಕ್ ನಿಷೇಧವಿದೆ. ಪರಿಸರ ಸ್ನೇಹಿಯಾಗಿ ನಡೆಯಿರಿ.
ವೈದ್ಯಕೀಯ ಸಹಾಯ: ಪೋರ್ಟ್ ಬ್ಲೇರ್‌ನಲ್ಲಿ ಮಾತ್ರ ಆಸ್ಪತ್ರೆಗಳ ವ್ಯವಸ್ಥೆ ಚೆನ್ನಾಗಿದೆ. ತುರ್ತು ಔಷಧಿಗಳನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ.