ಮುಂಬೈ, ಹಿಂದಿನ ಬಾಂಬೆ ಎಂದು ಕರೆಯಲ್ಪಡುವ ಈ ನಗರ, ಭಾರತದ ಆರ್ಥಿಕ ರಾಜಧಾನಿಯಾಗಿದೆ. ಇದು ಮಹಾರಾಷ್ಟ್ರ ರಾಜ್ಯದ ರಾಜಧಾನಿ ಮತ್ತು ದೇಶದ ಪ್ರಮುಖ ವಾಣಿಜ್ಯ, ಮನೋರಂಜನೆ ಮತ್ತು ಸಂಸ್ಕೃತಿ ಕೇಂದ್ರವಾಗಿದೆ. ಇಲ್ಲಿಯ ಬಾಲಿವುಡ್ ಚಿತ್ರರಂಗ, ಸಮುದ್ರತೀರಗಳು ಮತ್ತು ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಗೇಟ್‌ವೇ ಆಫ್ ಇಂಡಿಯಾ (Gateway of India)
ಸಮುದ್ರದ ತೀರದಲ್ಲಿ ಇರುವ ಈ ಆಕರ್ಷಕ ಗೇಟ್, ಬ್ರಿಟಿಷ್ ಕಾಲದ ಸ್ಮಾರಕವಾಗಿದ್ದು, ಮುಂಬೈ ಪ್ರವಾಸ ಪ್ರಾರಂಭಿಸಲು ಉತ್ತಮ ಸ್ಥಳವಾಗಿದೆ.
ಮರೈನ್ ಡ್ರೈವ್ (Marine Drive)
ಮುಂಬೈನ ಕ್ವೀನ್‌ನೆಕ್‌ಲೇಸ್ ಎಂದು ಕರೆಯಲ್ಪಡುವ ಈ ಸ್ಥಳವು, ಸಂಜೆಯ ಸಮಯದಲ್ಲಿ ಅದ್ಭುತ ಸೂರ್ಯಾಸ್ತಾಮಾನದ ದೃಶ್ಯ ಕಣ್ಣಿಗೆ ಹಬ್ಬ.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (CSMT)
ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಸೈಟ್ ನಲ್ಲಿ ದಾಖಲಾಗಿರುವ ಅದ್ಭುತ ತಾಣವಾಗಿದೆ. ಈ ರೈಲು ನಿಲ್ದಾಣ, ವಿಕ್ಟೋರಿಯನ್ ಕಲಾ ಶೈಲಿಯ ಶಿಲ್ಪಕಲೆಯ ಅದ್ಭುತ ಉದಾಹರಣೆಯಾಗಿದೆ.
ಜುಹು ಮತ್ತು ಚೌಪಾಟಿ ಬೀಚ್
ಸಮುದ್ರ ತೀರದಲ್ಲಿ ವಿಶ್ರಾಂತಿ ಮತ್ತು ಮುಂಬೈ ಶೈಲಿಯ ಸ್ಟ್ರೀಟ್ ಫುಡ್ ಸವಿಯುವುದಕ್ಕೆ ಈ ಸ್ಥಳಗಳು ಅತ್ಯುತ್ತಮ.
ಎಲಿಫಂಟಾ ಗುಹೆ (Elephanta Caves)
ಮುಂಬೈನಿಂದ ದೋಣಿಯಲ್ಲಿ ಪ್ರಯಾಣಿಸಿ ಹೋಗಬಹುದಾದ ಈ ಪ್ರಾಚೀನ ಗುಹಾ ದೇವಾಲಯಗಳು, ಶೈವ ಸಂಸ್ಕೃತಿಯ ಉದಾಹರಣೆಯಾಗಿದೆ.
ಬ್ಯಾಂಡ್ರಾ-ವರ್ಲಿ ಸಮುದ್ರ ಸೇತು (Bandra-Worli Sea Link)
ಬ್ಯಾಂಡ್ರಾ-ವರ್ಲಿ ಸಮುದ್ರ ಸೇತು ಮನೋಹರ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಈ ಸೇತುವೆ, ಮುಂಬೈನ ಸುಂದರ ಚಿತ್ರಣವನ್ನು ನೀಡುತ್ತದೆ.