Travel | ಕರ್ನಾಟಕದ ಯುನೆಸ್ಕೋ ಪರಂಪರೆಯ ತಾಣಗಳು ಯಾವುವು ಗೊತ್ತಾ? ಟೈಮ್ ಇದ್ರೆ ಒಂದು ಸಲ ನೀವೂ ನೋಡ್ಕೊಂಡು ಬನ್ನಿ!

ಕರ್ನಾಟಕ, ಧಾರ್ಮಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಪರಂಪರೆಯ ನೆಲೆಬೀಡು. ಇಲ್ಲಿನ ಪುರಾತನ ದೇವಾಲಯಗಳು, ಭವ್ಯವಾದ ಅರಮನೆಗಳು, ರಾಜವಂಶಗಳ ಆಳ್ವಿಕೆಯ ಇತಿಹಾಸ ಪ್ರಸಿದ್ಧ ಕೋಟೆಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಮೇಳೈಸಿಕೊಂಡಿವೆ. ಈ ಪೈಕಿ ಕೆಲವು ತಾತ್ಕಾಲಿಕ ಪಟ್ಟಿಯಲ್ಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಮಾನ್ಯತೆಯನ್ನು ಹೊಂದಿವೆ.

ಹಂಪಿ: ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ ತಾಣವು ದೇವಾಲಯಗಳು, ರಾಜಮನೆತನದ ಕಟ್ಟಡಗಳು ಹಾಗೂ ನದಿ ತೀರದ ಶಿಲ್ಪವೈಭವದಿಂದ ಖ್ಯಾತಿ ಹೊಂದಿದೆ. 1986ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಂಡಿದೆ.

5 unesco world heritage sites in india,ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಈ ತಾಣವನ್ನು ಒಮ್ಮೆಯಾದರೂ ಕಂಡಿದ್ದೀರಾ? - 5 unesco world heritage sites in india - Vijay Karnataka

ಪಟ್ಟದಕಲ್ಲು: 8ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾದ ದೇವಾಲಯಗಳು ಇಲ್ಲಿ ದ್ರಾವಿಡ ಹಾಗೂ ಆರ್ಯ ಶೈಲಿಯ ವೈಶಿಷ್ಟ್ಯವನ್ನು ಹೊಂದಿವೆ. 1987ರಲ್ಲಿ ವಿಶ್ವ ಪರಂಪರೆಯ ತಾಣವಾಗಿದೆ.

ಪಟ್ಟದಕಲ್ - ಕೆವಿನ್ ಸ್ಟಾಂಡೇಜ್

ಪಶ್ಚಿಮ ಘಟ್ಟಗಳು: ಜೀವವೈವಿಧ್ಯಕ್ಕೆ ಹೆಸರುವಾಸಿಯಾದ ಈ ಪರ್ವತಶ್ರೇಣಿಗಳು ಹಿಮಾಲಯಕ್ಕಿಂತ ಹಳೆಯವು. ಸಹ್ಯಾದ್ರಿ ಬೆಟ್ಟಗಳು ಎಂದೂ ಕರೆಯಲ್ಪಡುವ ಪಶ್ಚಿಮ ಘಟ್ಟಗಳು, ಭಾರತದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ 1,600 ಕಿ.ಮೀ. ವಿಸ್ತರಿಸಿರುವ ಪರ್ವತ ಶ್ರೇಣಿಯಾಗಿದ್ದು, ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್‌ಗಳನ್ನು ವ್ಯಾಪಿಸಿದೆ. 2012ರಲ್ಲಿ ಯುನೆಸ್ಕೋ ಮಾನ್ಯತೆ ಪಡೆದಿವೆ.

ಪಶ್ಚಿಮ ಘಟ್ಟಗಳು – NammaKPSC

ಬೇಲೂರು–ಹಳೇಬೀಡು: ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ನೆಲೆಗೊಂಡಿರುವ ಬೇಲೂರು ಮತ್ತು ಹಳೇಬೀಡು ದೇವಾಲಯಗಳು 10ರಿಂದ 14 ನೇ ಶತಮಾನಗಳ ಅವಧಿಯಲ್ಲಿ ನಿರ್ಮಿಸಲಾದ ಹೊಯ್ಸಳ ವಾಸ್ತುಶಿಲ್ಪ. ಬೇಲೂರಿನಲ್ಲಿರುವ ಚೆನ್ನಕೇಶವ ದೇವಾಲಯ ಮತ್ತು ಹಳೇಬೀಡಿನಲ್ಲಿರುವ ಹೊಯ್ಸಳೇಶ್ವರ ದೇವಾಲಯವು ಅವುಗಳ ಸೊಗಸಾದ ಕರಕುಶಲತೆ, ಸಂಕೀರ್ಣ ಕೆತ್ತನೆಗಳು ಮತ್ತು ನಕ್ಷತ್ರಾಕಾರದ ವೇದಿಕೆಗಳಿಗೆ ಹೆಸರುವಾಸಿಯಾಗಿದೆ. ಇದು ತಾತ್ಕಾಲಿಕ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

temples of Belur and Halebidu : Media India Group

ಶ್ರೀರಂಗಪಟ್ಟಣ: ಮೈಸೂರು ಬಳಿ ಇರುವ ಶ್ರೀರಂಗಪಟ್ಟಣವು ಕಾವೇರಿ ನದಿಯ ದ್ವೀಪದಲ್ಲಿರುವ ಒಂದು ಐತಿಹಾಸಿಕ ಪಟ್ಟಣ. ವಿಜಯನಗರ ಮತ್ತು ಹೊಯ್ಸಳ ಕಾಲದ ಅದ್ಭುತ ವಾಸ್ತುಶಿಲ್ಪದ ಅದ್ಭುತಗಳಿಗೆ ನೆಲೆಯಾಗಿದೆ. ಟಿಪ್ಪು ಸುಲ್ತಾನನ ಕಾಲದ ಕೋಟೆ, ಗುಂಬಜ್, ಮಸೀದಿ ಹಾಗೂ ರಂಗನಾಥಸ್ವಾಮಿ ದೇವಾಲಯವು ಐತಿಹಾಸಿಕ ನೆನೆಪಾಗಿ ಉಳಿದಿವೆ.

ಟಿಪ್ಪು ಸುಲ್ತಾನ್ - ಶ್ರೀರಂಗಪಟ್ಟಣದ ಮುತ್ತಿಗೆ - ಇತಿಹಾಸ ಮತ್ತು ವಾಸ್ತುಶಿಲ್ಪ - ವಿನ್ಯಾಸ ಪ್ರಯೋಗಾಲಯ

ಡೆಕ್ಕನ್ ಸುಲ್ತಾನರ ಸ್ಮಾರಕಗಳು: ಡೆಕ್ಕನ್ ಸುಲ್ತಾನರ ಸ್ಮಾರಕಗಳು ಡೆಕ್ಕನ್ ಸುಲ್ತಾನರ ಆಡಳಿತಗಾರರು ನಿರ್ಮಿಸಿದ ನಾಲ್ಕು ಐತಿಹಾಸಿಕ ತಾಣಗಳ ಸಂಗ್ರಹವನ್ನು ಒಳಗೊಂಡಿವೆ. ಗುಲ್ಬರ್ಗ, ಬೀದರ್, ಬಿಜಾಪುರ ಮತ್ತು ಹೈದರಾಬಾದ್‌ನಲ್ಲಿರುವ ಈ ರಚನೆಗಳು ಇಸ್ಲಾಮಿಕ್ ಮತ್ತು ಹಿಂದೂ ವಾಸ್ತುಶಿಲ್ಪ ಶೈಲಿಗಳ ಗಮನಾರ್ಹ ಸಮ್ಮಿಲನವನ್ನು ಪ್ರದರ್ಶಿಸುತ್ತವೆ. ಇಸ್ಲಾಮಿಕ್–ಹಿಂದೂ ಶೈಲಿಯ ಸ್ಮಾರಕಗಳು ನಾಮನಿರ್ದೇಶಿತ ಪಟ್ಟಿಯಲ್ಲಿ ಸೇರಿವೆ.

NK ಯಲ್ಲಿನ ಡೆಕ್ಕನ್ ಸುಲ್ತಾನೇಟ್ ಸೈಟ್‌ಗಳು ಯುನೆಸ್ಕೋ ಟ್ಯಾಗ್ ಅನ್ನು ಪಡೆಯಬಹುದು

ಇವುಗಳ ಸಂರಕ್ಷಣೆ, ಇತಿಹಾಸ ಸಂಗ್ರಹಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಯುನೆಸ್ಕೋ ಮಾನ್ಯತೆ ಅಮೂಲ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!