ಮಳೆ ಬಿದ್ದಾಗಲೇ ಮನಸ್ಸು ಟ್ರಿಪ್ ಮಾಡೋ ಮೂಡ್ ಗೆ ಹೋಗೋದು ಸಹಜ. ಮಳೆಗಾಲ ಅಂದರೆ ತಂಪು ಗಾಳಿ, ಇಂಪು ಹವಾಮಾನ, ಹಾಗೂ ಒಂದು ಚೆಂದದ ಟ್ರಿಪ್ ಮಾಡುವ ಆಸೆ! ಈ ಋತುವಿನಲ್ಲಿ ನೀವು ಸ್ನೇಹಿತರೊಡನೆ ಅಥವಾ ಕುಟುಂಬದವರೊಂದಿಗೆ ಸಮಯ ಕಳೆಯಲು ಯೋಚಿಸುತ್ತಿದ್ದರೆ, ದಕ್ಷಿಣ ಭಾರತದ ಕೆಲವು ಅದ್ಭುತ ಸ್ಥಳಗಳ ಲಿಸ್ಟ್ ಇಲ್ಲಿದೆ.
ಕೊಡೈಕೆನಾಲ್ – ತಮಿಳುನಾಡಿನ ಹಸಿರು ಗುಡ್ಡಗಳ ಮಧುರ ತಾಣ
ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಕೊಡೈಕೆನಾಲ್, ಸರೋವರ, ಹಸಿರು ಮರಗಳು ಮತ್ತು ಸುಂದರ ಹವಾಮಾನದಿಂದ ತುಂಬಿರುತ್ತದೆ. ಬೋಟ್ ರೈಡ್ ಇಲ್ಲಿನ ವಿಶೇಷ.
ಕೊಡಗು – ಕರ್ನಾಟಕದ ಸ್ವರ್ಗ
ಕಾಫಿ ತೋಟಗಳು, ಅಬೇ ಜಲಪಾತ, ತಲಕಾವೇರಿ – ಎಲ್ಲವೂ ಪ್ರಕೃತಿಯ ಚೆಲುವನ್ನು ಕಣ್ಣಿಗೆ ಕಟ್ಟಿದಂತೆ ತೋರಿಸುತ್ತವೆ. ಮಳೆಯ ಸಮಯದಲ್ಲಿ ಕೊಡಗು ಒಂದು ದೈವಿಕ ಅನುಭವ.
ಅಣ್ಣಾಮಲೈ ಬೆಟ್ಟಗಳು
ಹಚ್ಚ ಹಸಿರು ಕಾಡುಗಳು, ಶಾಂತ ಪರಿಸರ, ವನ್ಯಜೀವಿ ದೃಶ್ಯಗಳು – ಎಲ್ಲವನ್ನೂ ಒಟ್ಟಿಗೆ ಅನುಭವಿಸಲು ಸೂಕ್ತ ತಾಣ.
ಯೇರ್ಕಾಡ್ – ತಂಪು ವಾತಾವರಣದ ಕಡಿಮೆ ಜನಸಂಖ್ಯೆಯ ತಾಣ
ಶಾಂತಿಗಾಗಿಯೇ ಹುಡುಕುತ್ತಿರುವವರಿಗೆ ಈ ಚಿಕ್ಕ ಬೆಟ್ಟದ ಊರು ಪರಿಪೂರ್ಣ. ಕಾಫಿ ತೋಟ ಮತ್ತು ಸರೋವರ ಇಲ್ಲಿನ ಆಕರ್ಷಣೆ.
ಚಿಕ್ಕಮಗಳೂರು – ಹೈಕಿಂಗ್, ಕಾಫಿ ಮತ್ತು ಹವಾಮಾನ
ಕಾಫಿ ತೋಟಗಳು ಮತ್ತು ಹಚ್ಚ ಹಸಿರಿನ ಭೂದೃಶ್ಯಗಳಿಗೆ ಹೆಸರುವಾಸಿಯಾದ ಚಿಕ್ಕಮಗಳೂರು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ತಂಪಾದ ಗಿರಿಧಾಮವಾಗಿದೆ. ಮುಳ್ಳಯ್ಯನಗಿರಿ ಶಿಖರ, ಬಾಬಾ ಪುತ್ತನ್ಗಿರಿ ಬೆಟ್ಟಗಳು ಮತ್ತು ಪ್ರಶಾಂತವಾದ ಹೆಪ್ಪೆ ಜಲಪಾತಗಳಂತಹ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ.
ಮುನ್ನಾರ್ – ಕೇರಳದ ಚಹಾ ಸುಗಂಧದ ತಾಣ
ನೀರಾಡದ ಹವಾಮಾನ, ಗುಡ್ಡಗಳಿಂದ ಆವೃತವಾದ ವಾತಾವರಣ – ನಿಮ್ಮ ಫೋಟೋ ಅಲ್ಬಮ್‌ಗಾಗಿ ಪರಿಪೂರ್ಣ ಬ್ಯಾಕ್‌ಡ್ರಾಪ್.
ಇದೆಲ್ಲಾ ಓದಿ, ಈಗ ನಿಮ್ಮ ಬ್ಯಾಗ್ ಪ್ಯಾಕ್ ಮಾಡೋ ತಯಾರಿ ಪ್ರಾರಂಭಿಸಿ! ಈ ಮಳೆಗಾಲದಲ್ಲಿ ನಿಮ್ಮ ನೆಚ್ಚಿನವರ ಜೊತೆ ನಿಸರ್ಗದ ಜೊತೆಗೆ ಕಾಲ ಕಳೆಯೋ ಖುಷಿ, ಜೀವನದ ಮಧುರ ಸ್ಮರಣೆಯಾಗಲಿದೆ.