ಗರ್ಭಿಣಿಯರ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಸಮಯದಲ್ಲಿ ಶರೀರದಲ್ಲಿ ಆಗುವ ಸಣ್ಣ ಬದಲಾವಣೆಗಳು ಕೂಡ ಕೆಲವೊಮ್ಮೆ ಗಂಭೀರ ಪರಿಣಾಮಕ್ಕೆ ಕಾರಣವಾಗಬಹುದು. ವಿಶೇಷವಾಗಿ ಪ್ರಯಾಣ ಮಾಡುವಾಗ ಹೆಚ್ಚಿನ ಎಚ್ಚರಿಕೆಯಿಂದ ಇರುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಬಹುಮುಖ್ಯ. ಹೀಗಾಗಿ ಗರ್ಭಿಣಿಯರು ಪ್ರಯಾಣ ಮಾಡಬೇಕಾದರೆ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಬೇಕು.
ವೈದ್ಯರ ಸಲಹೆ ತೆಗೆದುಕೊಳ್ಳಿ
ದೂರ ಪ್ರಯಾಣಕ್ಕೆ ಮುನ್ನ ವೈದ್ಯರನ್ನು ಭೇಟಿ ಮಾಡುವುದು ಅತ್ಯಂತ ಅಗತ್ಯ. ಅವರು ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಸರಿಯಾದ ಮಾರ್ಗದರ್ಶನ ನೀಡುತ್ತಾರೆ.
ಆಹಾರ ಮತ್ತು ನೀರಿನ ಬಗ್ಗೆ ಎಚ್ಚರಿಕೆ
ಪ್ರಯಾಣದ ವೇಳೆ ಜಂಕ್ ಫುಡ್ ಅಥವಾ ಮಸಾಲೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಿ. ಶುದ್ಧ ನೀರನ್ನು ಮಾತ್ರ ಕುಡಿಯಬೇಕು ಮತ್ತು ಹತ್ತಿರದಲ್ಲಿ ಹೈಜೀನಿಕ್ ಆಹಾರ ಲಭ್ಯವಿಲ್ಲದಿದ್ದರೆ ಮನೆಯಿಂದ ಆಹಾರ ತೆಗೆದುಕೊಂಡು ಹೋಗಿ ತಿನ್ನುವುದು ಉತ್ತಮ.
ವಿಶ್ರಾಂತಿ ಅತ್ಯವಶ್ಯಕ
ಪ್ರಯಾಣದ ಹೊತ್ತಿನಲ್ಲಿ ಹೆಚ್ಚು ನಡಿಗೆ, ಕುಳಿತುಕೊಳ್ಳುವ ಸ್ಥಿತಿ ಇರುವುದರಿಂದ ಶರೀರದ ಮೇಲೆ ಒತ್ತಡ ಬರುವ ಸಾಧ್ಯತೆ ಇದೆ. ಕಾಲಕಾಲಕ್ಕೆ ವಿಶ್ರಾಂತಿ ತೆಗೆದುಕೊಳ್ಳಿ.
ಸೌಲಭ್ಯವಿರುವ ಆಸನ ಆಯ್ಕೆಮಾಡಿ
ರೈಲು, ಬಸ್ ಅಥವಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ವಾಶ್‌ರೂಮ್‌ಗೆ ಹತ್ತಿರದ ಆರಾಮದಾಯಕ ಆಸನವನ್ನು ಆರಿಸಿಕೊಳ್ಳಿ. ಸಡಿಲ ಬಟ್ಟೆಗಳನ್ನು ಧರಿಸಿ.
ಅಗತ್ಯ ಔಷಧಿ ಮತ್ತು ವೈದ್ಯಕೀಯ ಮಾಹಿತಿ
ನಿಮ್ಮ ನಿಯಮಿತ ಔಷಧಿಗಳನ್ನು ತೆಗೆದುಕೊಂಡು ಹೋಗಿ. ಜೊತೆಗೆ ತುರ್ತು ಸಮಯಕ್ಕೆ ಬೇಕಾಗುವ ಆಸ್ಪತ್ರೆಗಳ ಮಾಹಿತಿಯನ್ನು ಕೂಡಾ ನಿಮ್ಮ ಜೊತೆಗೆಯಿರಲಿ.