ಇತ್ತೀಚಿನ ದಿನಗಳಲ್ಲಿ ಬೆಳಗಿನ ಉಪಾಹಾರ ಮಾಡುವುದು ಎಂದರೆ ಕೆಲವರಿಗೆ ಅಸಡ್ಡೆ. “ಟೈಮ್ ಇಲ್ಲ”, “ಆಫೀಸ್‌ಗೆ ತಡವಾಗುತ್ತಿದೆ”, “ಟಿಫಿನ್ ಮಾಡಲು ಸಮಯವಿಲ್ಲ” ಎಂಬ ಕಾರಣಗಳನ್ನು ನೀಡುತ್ತಾ ಅನೇಕರು ದಿನದ ಅತ್ಯಂತ ಮುಖ್ಯವಾದ ಆಹಾರವನ್ನು ಬಿಟ್ಟು ಬಿಡುತ್ತಿದ್ದಾರೆ.
ಬೆಳಗಿನ ಉಪಾಹಾರವು ದೇಹಕ್ಕೆ ಬೇಕಾದ ಶಕ್ತಿಯ ಪ್ರಾರಂಭದ ಮೂಲವಾಗಿದ್ದು, ಹಸಿವಿನಿಂದ ನೇರವಾಗಿ ಮಧ್ಯಾಹ್ನದ ಊಟಕ್ಕೆ ಹೋಗುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳಿಂದ ಹಿಡಿದು ಉದ್ಯೋಗಸ್ಥರು, ಪ್ರಯಾಣದಲ್ಲಿರುವವರು ಈ ಉಪಾಹಾರವನ್ನು ನಿರ್ಲಕ್ಷಿಸುತ್ತಿದ್ದಾರೆ.
ಆದರೆ ಬೇಗನೆ ಸಿದ್ಧಗೊಳ್ಳುವ, ಪೌಷ್ಟಿಕತೆಯಿರುವ ಕೆಲ ಉಪಹಾರ ಐಟಂಗಳನ್ನು ಪ್ರಯಾಣದಲ್ಲಿಯೂ ತಿನ್ನಬಹುದು. ಇವು ಆರೋಗ್ಯಕ್ಕೂ ಒಳ್ಳೆಯದು.
ಮುಸಲಿ (Muesli):
ಹಾಲು ಅಥವಾ ಮೊಸರಿನಲ್ಲಿ ಹಾಕಿಕೊಂಡು ತಿನ್ನಬಹುದಾದ ಈ Muesli ಯಲ್ಲಿ ಪ್ರೋಟೀನ್, ಫೈಬರ್ ಮತ್ತು ವಿಟಮಿನ್‌ಗಳಿಂದ ತುಂಬಿರುತ್ತದೆ. ಇದನ್ನು ನೀವು ಪ್ರಯಾಣದಲ್ಲಿ ಇದ್ದಾಗಲೂ ಸಹ ಸೇವಿಸಬಹುದು. ಇದಕ್ಕೆ ಅಂತ ಮನೆಯಲ್ಲಿ ತಯಾರಿಸಲು ಸಮಯ ಬೇಕು ಅಂತಿಲ್ಲ.
ಪ್ರೋಟೀನ್ ಬಾರ್ (Protein Bar):
ಸಣ್ಣದಾದರೂ ಶಕ್ತಿಯ ತುಂಬಿರುವ ಈ ಬಾರ್ ಹಣ್ಣುಗಳು, ಬೀಜಗಳು ಮತ್ತು ಧಾನ್ಯಗಳಿಂದ ತಯಾರಾಗಿದ್ದು, ದಿನದ ಪೌಷ್ಟಿಕ ಆರಂಭಕ್ಕೆ ಸೂಕ್ತ.
ಚಪಾತಿ ರ‍್ಯಾಪ್ (Chapati wrap) :
ಮಾಡಲು ಸುಲಭ. ಹಿಂದಿನ ದಿನದ ರೋಟಿಗೆ ಚೀಸ್, ತರಕಾರಿ ಮತ್ತು ಸಾಸ್ ಸೇರಿಸಿ ಗ್ರಿಲ್ ಮಾಡಿದರೆ, ಸಿಂಪಲ್ ಉಪಾಹಾರ ಸಿದ್ಧ.
ಬ್ರೆಡ್ ಟೋಸ್ಟ್ (Bread toast):
ಬೇಸಿಕ್ ಆದರೂ ಪೌಷ್ಟಿಕ. ಬ್ರೆಡ್ ಟೋಸ್ಟ್‌ಗಳ ಜೊತೆ ಪೀನಟ್ ಬಟರ್ ಅಥವಾ ತರಕಾರಿ ಸೇರಿಸಿ ದಿನದ ಉತ್ತಮ ಪ್ರಾರಂಭಕ್ಕೆ ಪೂರಕ.
ಥಿಕ್ ಶೇಕ್ (Thick Shake):
ಹಾಲು, ಹಣ್ಣು ಮತ್ತು ಪೀನಟ್ ಬಟರ್ ಸೇರಿಸಿ ತಯಾರಿಸಿದ ದಪ್ಪ ಶೇಕ್ ನಿಮ್ಮ ದೇಹಕ್ಕೆ ಅಗತ್ಯ ಎನರ್ಜಿ ನೀಡುತ್ತದೆ. ಬಾಟಲ್‌ನಲ್ಲಿ ತುಂಬಿಸಿಕೊಂಡು ಹೋದರೆ ಯಾವಾಗಬೇಕಾದ್ರು ಕುಡಿಬಹುದು.
ಮೊಸರು (Curd/Yogurt):
ಪ್ಯಾಕ್ ಮಾಡಿರುವ ಮೊಸರು ಈಗ ಮಾರುಕಟ್ಟೆಯಲ್ಲಿ ವಿವಿಧ ರುಚಿಗಳಲ್ಲಿ ಸಿಗುತ್ತವೆ. ಹಾಲಿನ ಉತ್ಪನ್ನವಾಗಿರುವ ಮೊಸರು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.
ತಾಜಾ ಹಣ್ಣುಗಳು (Fresh fruits):
ಸೇಬು, ಬಾಳೆಹಣ್ಣು, ಪೇರಳೆ, ಪಪ್ಪಾಯಿ, ಕಲ್ಲಂಗಡಿ – ಯಾವುದಾದರೂ ಹಣ್ಣು ನಿಮ್ಮ ಹೊಟ್ಟೆಗೂ ಖುಷಿ, ದೇಹಕ್ಕೂ ಆರೋಗ್ಯ ನೀಡಬಹುದು. ಪ್ಯಾಕ್ ಮಾಡುವುದು ಸುಲಭ, ತಿನ್ನುವುದು ಆದಷ್ಟು ಸ್ಮಾರ್ಟ್ ಆಯ್ಕೆ.