ಸಾಹಸದಿಂದ ಕೂಡಿದ ಟ್ರೆಕ್ಕಿಂಗ್ ಮಾಡುವ ಆಸೆ ಇರುವವರು ಗೋವಾಕ್ಕೆ ಹೋಗೋದು ಒಳ್ಳೆಯ ಆಯ್ಕೆ. ಗೋವಾ ಬೀಚ್‌ಗಳಿಗೆ ಮಾತ್ರ ಫೇಮಸ್ ಅಲ್ಲ; ಇಲ್ಲಿ ಹಲವಾರು ನಿಸರ್ಗ ಸೌಂದರ್ಯವನ್ನು ಆನಂದಿಸಬಲ್ಲಂತಹ ಟ್ರೆಕ್ಕಿಂಗ್ ಹಾದಿಗಳು ಕೂಡ ಇವೆ. ಹಚ್ಚ ಹಸಿರು, ಹರಿಯುವ ಹೊಳೆ, ಕಣಿವೆಗಳು ಹಾಗೂ ದಟ್ಟ ಕಾಡುಗಳಲ್ಲಿ ನಡೆಯುವ ಈ ಟ್ರೆಕ್‌ಗಳು ಪ್ರಕೃತಿ ಪ್ರಿಯರಿಗೆ ಖಚಿತವಾಗಿ ಮೆಚ್ಚುಗೆ ತರುತ್ತವೆ.
ದೂಧ್ ಸಾಗರ್ ಜಲಪಾತದ ಟ್ರೆಕ್ಕಿಂಗ್
ದಕ್ಷಿಣ ಭಾರತದ ಅತ್ಯಂತ ಸುಂದರವಾದ ಚಾರಣ ಹಾದಿಗಳಲ್ಲಿ ದೂಧ್ ಸಾಗರ್ ಟ್ರೆಕ್ ಪ್ರಮುಖವಾದದ್ದು. 14 ಕಿಮೀ ಉದ್ದದ ಈ ಹಾದಿಯಲ್ಲಿ ಪಶ್ಚಿಮಘಟ್ಟದ ಹಸಿರು ನೋಟಗಳು ಹಾಗೂ ಹಾಲಿನಂತೆ ಧುಮ್ಮಿಕ್ಕುವ ಜಲಪಾತದ ದೃಶ್ಯ ವೀಕ್ಷಿಸಲು ಸಾವಿರಾರು ಮಂದಿ ಬರುತ್ತಾರೆ.
ನೇತ್ರಾವಳಿ ವನ್ಯಜೀವಿ ಅಭಯಾರಣ್ಯ ಟ್ರೆಕ್ಕಿಂಗ್
ದಕ್ಷಿಣ ಗೋವಾಕ್ಕೆ ಸೇರಿದ ಈ ಅಭಯಾರಣ್ಯವು ಹಲವಾರು ಪಕ್ಷಿ ಮತ್ತು ಪ್ರಾಣಿಗಳನ್ನು ಒಳಗೊಂಡಿದೆ. ದಟ್ಟ ಕಾಡು, ಶಾಂತವಾದ ವಾತಾವರಣ, ಸಣ್ಣ ಜಲಪಾತಗಳೊಂದಿಗೆ ಈ ಹಾದಿಯು ಸ್ವಲ್ಪ ಕಷ್ಟ ಕೊಡುತ್ತೆ ನಡಿಯೋಕೆ ಅನ್ನೋದು ನೆನಪಿರಲಿ.
ಟೊಡೊ ಜಲಪಾತದ ಟ್ರೆಕ್ಕಿಂಗ್
ಟೊಡೊ ಜಲಪಾತವು ಅತಿ ಕಡಿಮೆ ಜನರಿಗೆ ಪರಿಚಿತವಾದರೂ, ಇದರ ನೈಸರ್ಗಿಕ ಸೌಂದರ್ಯ ಅಪಾರ. ಹರಿಯುವ ನದಿಗಳನ್ನು ದಾಟಿ, ಹಸಿರಿನಲ್ಲಿ ಚಾರಣ ಮಾಡುವ ಈ ಅನುಭವವು ಸಾಹಸಪ್ರಿಯರಿಗೆ ತುಂಬಾ ಸಂತೋಷ ನೀಡುತ್ತದೆ.
ಚೋರ್ಲಾ ಘಾಟ್ ಟ್ರೆಕ್ಕಿಂಗ್
ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ಗಡಿಯಲ್ಲಿ ಇರುವ ಚೋರ್ಲಾ ಘಾಟ್ ಟ್ರೆಕ್, ನಿಸರ್ಗ ಪ್ರಿಯರಿಗೆ ಪರ್ಫೆಕ್ಟ್. ಆಳವಾದ ಕಣಿವೆ, ದಟ್ಟ ಕಾಡು, ಸಣ್ಣ ಜಲಪಾತಗಳು ಈ ಚಾರಣವನ್ನು ಅದ್ಭುತ ಅನುಭವವಾಗಿಸುತ್ತವೆ.