ಟ್ರಿಪ್ ಮಾಡೋದು ಪ್ರತಿಯೊಬ್ಬರ ಕನಸು. ಆದರೆ ವೆಚ್ಚಗಳನ್ನು ಸರಿಯಾಗಿ ನಿರ್ವಹಿಸದೆ ಹೋದ್ರೆ ತಿರುಗಾಟದ ನಂತರ ಖರ್ಚಿನ ಮಳೆ ಸುರಿಯುವುದು ಖಚಿತ. ಹಾಗಾಗಿ, ಬಜೆಟ್‌ನಲ್ಲಿ ಪ್ರಯಾಣ ಮಾಡುವವರಿಗೆ ಕೆಲವು ಬುದ್ಧಿವಂತಿಕೆಯ ಸಲಹೆಗಳು ಇಲ್ಲಿವೆ.
ಕಡಿಮೆ ಖರ್ಚಿನ ಸ್ಥಳ ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಮಂದಿ ಖ್ಯಾತ ಪ್ರವಾಸ ಸ್ಥಳಗಳಿಗೆ ಹೋಗುವ ಬದಲು, ಕಡಿಮೆ ಜನರಿಗೆ ತಿಳಿದಿರುವ ನೈಸರ್ಗಿಕ ಸೌಂದರ್ಯದಿಂದ ಕೂಡಿದ ಸ್ಥಳಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. ಇಲ್ಲಿಗೆ ಹೋಟೆಲ್, ಆಹಾರ, ಪ್ರವೇಶ ಶುಲ್ಕ ಎಲ್ಲವೂ ಕಮ್ಮಿ ಇರುತ್ತದೆ.
ಪ್ರಯಾಣಕ್ಕೆ ತಕ್ಕ ಕಾಲ ಆಯ್ಕೆ ಮಾಡಿ
ಆಫ್ ಸೀಸನ್‌ನಲ್ಲಿ ಟ್ರಾವೆಲ್ ಮಾಡಿದರೆ ನಿಮ್ಮೆದುರಿನ ಜನಸಂದಣಿ ಕಡಿಮೆಯಾಗಿರುತ್ತದೆ. ಜೊತೆಗೆ ಹೋಟೆಲ್, ವಿಮಾನ ಅಥವಾ ಬಸ್ ಟಿಕೆಟ್ ದರಗಳು ಬಹುತೇಕ ಕಡಿಮೆಯಾಗಿರುತ್ತವೆ.
ವಿಮಾನ ಅಥವಾ ರೈಲು ಟಿಕೆಟ್‌ಗಳನ್ನು ಮುಂಚಿತವಾಗಿ ಬುಕ್ ಮಾಡಿ
ಟಿಕೆಟ್‌ಗಳ ದರ ದಿನ ಕಳೆದಂತೆ ಹೆಚ್ಚಾಗುತ್ತವೆ. ಹಾಗಾಗಿ, ಹೋಗೋ ದಿನಕ್ಕೆ ಕಾಯದೆ ಕೆಲವಾರು ವಾರಗಳ ಮುಂಚೆಯೇ ಟಿಕೆಟ್ ಬುಕ್ ಮಾಡಿದರೆ ಉತ್ತಮ ಡಿಸ್ಕೌಂಟ್ ಸಿಗುತ್ತದೆ.
ಹಾಸ್ಟೆಲ್ ಅಥವಾ ಹೋಮ್‌ಸ್ಟೇ ಆಯ್ಕೆ ಮಾಡಿ
ಲಕ್ಸುರಿ ಹೋಟೆಲ್‌ಗಳಲ್ಲಿ ತಂಗುವ ಬದಲು ಹಾಸ್ಟೆಲ್, ಹೋಮ್‌ಸ್ಟೇ ಅಥವಾ ಬುಜೆಟ್ ಲಾಡ್ಜ್‌ಗಳಲ್ಲಿ ಉಳಿದರೆ ನಿಮ್ಮ ಖರ್ಚು ಕಡಿಮೆಯಾಗುತ್ತದೆ.
ಲೋಕಲ್ ಟ್ರಾನ್ಸ್ಪೋರ್ಟ್ ಬಳಸಿಕೊಳ್ಳಿ
ಟ್ಯಾಕ್ಸಿ ಅಥವಾ ಕಾರ್ ಬಾಡಿಗೆಗೆ ತೆಗೆದುಕೊಂಡರೆ ವೆಚ್ಚ ಹೆಚ್ಚಾಗುತ್ತದೆ. ಬದಲು ಬಸ್, ಮೆಟ್ರೋ ಅಥವಾ ಶೇರ್ ಆಟೋ ಬಳಸಿದರೆ ನೀವು ಸ್ಥಳೀಯರನ್ನು ಭೇಟಿಯಾಗಿ, ಕಡಿಮೆ ಹಣದಲ್ಲಿ ಸಂಚರಿಸಬಹುದು.
ಹೆಚ್ಚು ಹಣ ವೆಚ್ಚವಾಗುವ ರೆಸ್ಟೋರೆಂಟ್ ತಪ್ಪಿಸಿ
ಪ್ರಸಿದ್ಧ ತಿನಿಸು ಸಿಗುವ ದೊಡ್ಡ ಹೋಟೆಲ್ ಆಯ್ಕೆ ಮಾಡುವ ಬದಲು ಸ್ಥಳೀಯ ಆಹಾರ ಮಳಿಗೆಗೆಳನ್ನು ಆಯ್ಕೆ ಮಾಡಿಕೊಂಡರೆ ಆರೋಗ್ಯಕರವಾಗಿರುವ ಜೊತೆಗೆ ಖರ್ಚು ಕಡಿಮೆಯಾಗುತ್ತದೆ.
ಪ್ರೀಪೇಯ್ಡ್ ಪ್ಯಾಕ್ ಪ್ಲಾನ್ ಮಾಡಿಕೊಳ್ಳಿ
ನೀವು ಒಂದು ಚಿಕ್ಕ ಬಜೆಟ್ ಪ್ಲಾನ್ ತಯಾರಿಸಿಕೊಂಡರೆ, ಯಾವಾಗ ಎಷ್ಟು ಖರ್ಚು ಮಾಡಬೇಕು ಎಂಬ ನಿರ್ಣಯ ಇರುತ್ತದೆ. ಇದರಿಂದ ಅನವಶ್ಯಕ ಖರ್ಚಿಗೆ ಬ್ರೇಕ್ ಹಾಕಬಹುದು.
ಮೆಮೊರೀಸ್ ಜಾಸ್ತಿ – ಖರ್ಚು ಕಡಿಮೆ
ಹೆಚ್ಚು ಪರ್ಸ್ ಖಾಲಿ ಮಾಡಿ ಶಾಪಿಂಗ್ ಮಾಡೋದಕ್ಕಿಂತ ಫೋಟೋ ಕ್ಲಿಕ್ಕಿಸಿ, ಸ್ಥಳೀಯ ಪರಂಪರೆ, ಸಂಸ್ಕೃತಿಯನ್ನು ಅನುಭವಿಸಿ ಮೆಮೊರೀಸ್ ಕ್ರಿಯೇಟ್ ಮಾಡೋದು ಬಹಳ ಮೌಲ್ಯಯುತವಾದದ್ದು.