Travel | ಬೆಂಗಳೂರಲ್ಲಿದ್ದುಕೊಂಡು ಈ ಪ್ಲೇಸ್ ಗಳಿಗೆ ಹೋಗಿಲ್ಲ ಅಂದ್ರೆ ನೀವು ಅದ್ಭುತವಾದದ್ದನ್ನು ಮಿಸ್ ಮಾಡ್ಕೊಂಡಿದ್ದೀರಾ ಅಂತ ಅರ್ಥ!

ಗಿಜಿಗುಡವ ಟ್ರಾಫಿಕ್, ಜನದಟ್ಟಣೆ, ಆಫೀಸ್‌ ಒತ್ತಡ, ಯಾಂತ್ರಿಕ ದಿನಚರಿ ಇವೆಲ್ಲವೂ ನಮ್ಮ ಕಣ್ಣೆದುರಿಗೆ ಬರುವದು ಬೆಂಗಳೂರಿನ ಸಾಮಾನ್ಯ ಚಿತ್ರ. ಆದರೆ ಈ ತಂತ್ರಜ್ಞಾನ ನಗರದಲ್ಲಿ ಸ್ವಲ್ಪ ಗಮನಿಸಿದರೆ ಪ್ರಕೃತಿಯ ಮಡಿಲಲ್ಲೇ ಅಡಗಿದ ಅನೇಕ ಸೊಬಗುಗಳಿವೆ. ಮಳೆಗಾಲ ಬಂದರೆ, ಈ ಪ್ರದೇಶಗಳು ಇನ್ನೂ ಸುಂದರವಾಗಿ ಕಾಣುತ್ತವೆ. ವೀಕೆಂಡ್‌ಗಳಲ್ಲಿ ಒಂದಷ್ಟು ಉಸಿರಾಡೋ ಹೊತ್ತು ಬೇಕು ಅನ್ನಿಸುವವರಿಗೆ, ಇಲ್ಲಿವೆ ಬೆಂಗಳೂರಿನಲ್ಲೇ ಇರುವ 5 ಹಸಿರು ತಾಣಗಳು:

ತುರಹಳ್ಳಿ ಅರಣ್ಯ – ನಗರದ ಒಳಗೆ ಇರುವ ‘ಹಸಿರು ನೀರವ’
ಕನಕಪುರ ರಸ್ತೆಯಲ್ಲಿರುವ ತುರಹಳ್ಳಿ ಅರಣ್ಯ ಪ್ರದೇಶಕ್ಕೆ ಪ್ರವೇಶ ಶುಲ್ಕವಿಲ್ಲ. ಬೆಳಿಗ್ಗೆಯ ತಂಪಾದ ಗಾಳಿಯಲ್ಲಿ ಇಲ್ಲಿಗೆ ಭೇಟಿ ನೀಡಿದರೆ ನವಿಲು, ಹಲವು ಹಕ್ಕಿಗಳ ಚಿಲಿಪಿಲಿ ಕೇಳಿ ಮನಸ್ಸಿಗೆ ನೆಮ್ಮದಿಯ ಸಿಗುತ್ತದೆ. ಇಲ್ಲಿನ ಬೆಟ್ಟದ ತುದಿಯಲ್ಲಿರುವ ಶಿವನ ದೇಗುಲಕ್ಕೂ ಚಾರಣ ಮಾಡಬಹುದು.

ತುರಹಳ್ಳಿ ಅರಣ್ಯ

ತಟ್ಟೆಕೆರೆ ಸರೋವರ – ಪಕ್ಷಿವೀಕ್ಷಕರ ಪರಿಪೂರ್ಣ ತಾಣ
ಬೆಂಗಳೂರುದಿಂದ 40 ಕಿಲೋಮೀಟರ್‌ ದೂರದಲ್ಲಿರುವ ತಟ್ಟೆಕೆರೆ ಸರೋವರ, ಮಳೆಗಾಲದಲ್ಲಿ ತನ್ನ ಸಂಪೂರ್ಣ ತಾಜಾ ರೂಪದಲ್ಲಿ ಕಾಣಿಸುತ್ತದೆ. ಇಲ್ಲಿ ಸೈಕ್ಲಿಂಗ್ ಮಾಡುವ ಅನುಭವವೋ ಬೇರೆಮಟ್ಟದಲ್ಲಿರುತ್ತದೆ. ಕೊಕ್ಕರೆಗಳು, ನೀಲಗಿರಿ ಮರಗಳು, ಹಕ್ಕಿಗಳ ಹಾರಾಟ ಎಲ್ಲವೂ ಮನಸ್ಸಿಗೆ ಸಿಹಿ ನೆನಪುಗಳನ್ನೆ ನೀಡುತ್ತವೆ.

ವಿರಾಮ ಬೇಕೇ? ತಟ್ಟೆಕೆರೆ ಕೆರೆಗೆ ಹೋಗಿ ಈ ಏಕಾಂತ ಸರೋವರದ ನೈಸರ್ಗಿಕ ಸೌಂದರ್ಯವನ್ನು  ನೆನೆಯಿರಿ | ವಾಟ್ಸ್ ಹಾಟ್ ಬೆಂಗಳೂರು

ಅವಲಹಳ್ಳಿ ಅರಣ್ಯ – ಫೋಟೋಗ್ರಫಿಗೆ ಸ್ವರ್ಗಸಮಾನ
ಬೆಂಗಳೂರು ಹೊರವಲಯದ ಕಿತ್ತಗನೂರಿನಲ್ಲಿ ಇರುವ ಅವಲಹಳ್ಳಿ ಅರಣ್ಯದಲ್ಲಿ ಕೆಂಪು ಮಣ್ಣಿನ ಹಾದಿಗಳು ಮತ್ತು ಮಳೆಯ ನೀರಿನಿಂದ ನಿರ್ಮಿತವಾಗುವ ಹೊಳೆಗಳು ಪ್ರಕೃತಿಯ ಸೌಂದರ್ಯವನ್ನ ಮತ್ತಷ್ಟು ಕಂಗೊಳಿಸುವಂತೆ ಮಾಡುತ್ತದೆ. ಇಲ್ಲಿ ಟ್ರೆಕ್ಕಿಂಗ್‌ ಮಾಡಲು ಮೋಜಿನ ಅನುಭವ ನೀಡುತ್ತದೆ. ಕ್ಯಾಮೆರಾ ಹಿಡಿದು ಹೋದರೆ ನಿಜಕ್ಕೂ ನೆನಪಿನ ವಾಕಿಂಗ್‌ ಟೂರ್‌ ಆಗೋದು ಖಂಡಿತ.

Explore Avalahalli Forest – Hiking, Bird Watching & Cycling

ಮುತ್ತಾನಲ್ಲೂರು ಸರೋವರ – ಶಾಂತಪ್ರಿಯರ ನೆಚ್ಚಿನ ತಾಣ
ಸರ್ಜಾಪುರದ ಬಳಿ ಇರುವ ಈ ಸರೋವರವನ್ನು ಅನೇಕರಿಗೆ ಗೊತ್ತಿಲ್ಲ. ಆದರೆ ಮಳೆಗಾಲದಲ್ಲಿ ಇದು ಸಂಪೂರ್ಣ ಚಿತ್ತಾಕರ್ಷಕವಾಗುತ್ತದೆ. ಬಿದಿರಿನ ಪೊದೆಗಳು, ನಿಧಾನವಾಗಿ ಹಾರುವ ಡ್ರಾಗನ್‌ಫ್ಲೈಗಳು, ಮುರಿದ ದೋಣಿಗಳು – ಎಲ್ಲವೂ ಶಾಂತ ಮನಃಸ್ಥಿತಿಗೆ ಕಾರಣವಾಗುತ್ತವೆ.

ಮುತಾನಲ್ಲೂರು ಕೆರೆ: ಬೂಟ್ ಹದ್ದಿನ ಮುಂಜಾನೆ, 221115 | ಜಗತ್ತಿಗೆ ಡಿಪಾಂಟಿ

ದೊಡ್ಡ ಆಲದ ಮರ – ನಾಡಿನ ಶಕ್ತಿ ಮತ್ತು ಸಾಂಸ್ಕೃತಿಕ ಪೌರಾಣಿಕತೆ
400 ವರ್ಷಗಳ ಇತಿಹಾಸವಿರುವ ಈ ಮರ ಬೆಂಗಳೂರು ಹೊರವಲಯದಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಬೇರುಗಳು ಮರದ ಇತಿಹಾಸವನ್ನು ಇಂಗಿತಗೊಳಿಸುತ್ತವೆ. ಹತ್ತಿರದ ದ್ರಾಕ್ಷಿ ತೋಟಗಳು, ಬಯಲು ಪ್ರದೇಶಗಳು ಇಲ್ಲಿನ ಶಾಂತತೆಗೆ ಸಾಥ್ ನೀಡುತ್ತವೆ.

 

ದೊಡ್ಡ ಆಲದ ಮಾರ ಬೆಂಗಳೂರು ಟಿಕೆಟ್‌ಗಳು, ಸಮಯಗಳು, ಆಫರ್‌ಗಳು ಜುಲೈ 2025 |  ಎಕ್ಸ್‌ಪ್ಲೋರ್‌ಬೀಸ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!