ಮಾನ್ಸೂನ್ ಬಂದ್ರೆ ಕೆಲವು ಜನ ಮಳೆಗಾಲದ ತೊಂದರೆ ಬಗ್ಗೆ ಆಲೋಚಿಸುತ್ತಾರೆ. ಆದರೆ ಪರಿಸರ ಪ್ರೇಮಿಗಳು, ಪ್ರಕೃತಿಯ ಕಣ್ಣಂಚಿನಲ್ಲಿ ಜೋತೆಯಾಗೋ ಪರ್ವತಗಳು, ಜಲಪಾತಗಳು ಮತ್ತು ಮಂಜು ಮುದ್ದಾದ ಹಸಿರು ಪರಿಸರ ನೋಡಬೇಕೆಂದು ಬಯಸುತ್ತಾರೆ. ಇಂಥವರಿಗೆ ಈ ಮಳೆಗಾಲವೇ ಟೂರಿಸಂಗೆ ಅದ್ಭುತ ಕಾಲ. ಕೆಳಗಿನ 6 ಸ್ಥಳಗಳು ಮಾನ್ಸೂನ್‌ನಲ್ಲೇ ನೋಡಬೇಕು.
ಮುನ್ನಾರ್ (Munnar)
ಮುನ್ನಾರ್ ನಲ್ಲಿ ಮಳೆ ಮತ್ತು ಮಂಜಿನ ನಡುವೆ ತಾಜಾ ಚಹಾ ತೋಟಗಳಿವೆ. ಬೆಟ್ಟಗಳಿಂದ ಧುಮ್ಮಿಕ್ಕುವ ಜಲಪಾತಗಳು, ಗಾಳಿಯಲ್ಲಿ ತೇಲುವ ಚಹಾ ಎಲೆಗಳ ಪರಿಮಳ. ಇದೊಂದು ಲೈವ್ ಗ್ರೀನ್ ಪೆಯಿಂಟಿಂಗ್ ನಂತೆ ಅನ್ನಿಸೋದು ಖಂಡಿತ.
ಅಲೆಪ್ಪಿ (Alleppey)
ಮಳೆ ಸುರಿಯುವಾಗ ನಿಧಾನಕ್ಕೆ ಮುಂದೆ ಸಾಗುವ ಹೌಸ್‌ಬೋಟ್. ತೆಂಗು ಮರಗಳು, ಮೋಡ ತುಂಬಿದ ಆಕಾಶ, ಮತ್ತು ಮೃದುವಾದ ಮಳೆ – ಮನಸ್ಸಿಗೆ ವಿಶ್ರಾಂತಿ ಕೊಡುವ ಕಾಂಬಿನೇಷನ್. ಇಷ್ಟೇ ಬೇಕಾದದ್ದು ಅಲ್ವ ಮನಸ್ಸಿಗೆ.
ವಯನಾಡ್ (Wayanad)
ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಡು, ಮೈ ತುಂಬಿ ಹರಿಯುವ ಜಲಪಾತಗಳು. ಮೀನ್‌ಮುಟ್ಟಿ ಮತ್ತು ಸೂಚಿಪರಾ ಜಲಪಾತಗಳಿಗೆ ಚಾರಣಗಳು ಹೆಚ್ಚು ರೋಮಾಂಚಕವಾಗುತ್ತವೆ. ಜೊತೆ ವನ್ಯಜೀವಿ ಅಭಯಾರಣ್ಯಗಳಲ್ಲಿ ಜೀವಚೇತನ ಹುಟ್ಟಿಸುತ್ತವೆ.
ತೇಕ್ಕಡಿ (Thekkady)
ಪೆರಿಯಾರ್ ಅರಣ್ಯ ಮಳೆಗಾಲದಲ್ಲಿ ಹುಲಿ, ಆನೆಯ ಜಾಡನ್ನು ಪತ್ತೆಹಚ್ಚಲು ಸೂಕ್ತ. ಬಿದಿರಿನ ದೋಣಿಯಲ್ಲಿ ತೇಲುತ್ತಾ ಮಂಜು ತುಂಬಿದ ಅರಣ್ಯ ನೋಡೋಣ ಅಂದ್ರೆ, ಇದಕ್ಕಿಂತ ಅದ್ಭುತ ಇನ್ನೇನಿದೆ.
ವರ್ಕಲಾ (Varkala)
ಶಾಂತಿಯ ಸಮುದ್ರತೀರ ಬೇಕಾದ್ರೆ ವರ್ಕಲಾ ಬೆಸ್ಟ್. ಕಡಲತೀರಗಳು ಕಡಿಮೆ ಜನದಟ್ಟಣೆಯಿಂದ ಕೂಡಿರುತ್ತವೆ. ಬಂಡೆಗಳ ಮಧ್ಯೆ ಕೆಫೆಯಲ್ಲಿ ಕುಳಿತು ಅರೇಬಿಯನ್ ಸಮುದ್ರದ ಆಲೆಯೊಂದಿಗೆ ಆತ್ಮಾವಲೋಕನೆ ಮಾಡೋರಿಗೆ ಒಳ್ಳೆಯ ಅವಕಾಶ.
ನೀವು ಸಹ ಮಳೆಯ ರುಚಿ ನೋಡಬೇಕು ಅಂದ್ರೆ, ಈ ಸ್ಥಳಗಳನ್ನು ನಿಮ್ಮ ಟ್ರಿಪ್ ಲಿಸ್ಟ್‌ಗೆ ಸೇರಿಸಿ. ಪ್ರಕೃತಿಯೊಂದಿಗೆ ಒಂದಾಗೋ ಅನುಭವ ನಿಮ್ಮನ್ನು ನಿಜಕ್ಕೂ ರಿಚಾರ್ಜ್ ಮಾಡುತ್ತದೆ!