Travel | ಹಂಪಿಗೆ ಹೋದ್ರೆ ಮಾತ್ರ ಸಾಕಾಗಲ್ಲ! ಅದರ ಸುತ್ತಾ ಮುತ್ತಾ ಇರೋ ಈ 7 ಸ್ಥಳಗಳನ್ನು ಮಿಸ್ ಮಾಡ್ಬೇಡಿ

ಹಂಪಿ (Hampi) ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಇರುವ ಈ ಐತಿಹಾಸಿಕ ನಗರವು ಯುನೆಸ್ಕೋ ವಿಶ್ವ ಪರಂಪರಾ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಇಂದು ಕಣ್ತುಂಬಿಕೊಳ್ಳಲು ಹಲವಾರು ಜನರು ಇಲ್ಲಿ ಭೇಟಿ ನೀಡುತ್ತಾರೆ. ಆದರೆ ಹಂಪಿಗೆ ಹೋದಾಗ ಸುತ್ತಮುತ್ತಲಲ್ಲಿರುವ ಇತಿಹಾಸ, ವಾಸ್ತುಶಿಲ್ಪ ಹಾಗೂ ನೈಸರ್ಗಿಕ ಮೌಲ್ಯದಿಂದ ಕೂಡಿರುವ ಕೆಲವು ಅಸಾಧಾರಣ ಸ್ಥಳಗಳನ್ನು ಸಹ ತಪ್ಪದೆ ಭೇಟಿಕೊಡಬೇಕು.

ಬಾದಾಮಿ – ಶಿಲ್ಪಕಲೆಯ ಜೀವಂತ ನಿದರ್ಶನ
ಹಂಪಿಯಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ಬಾದಾಮಿ, ಬಂಡೆ ಕತ್ತರಿಸಿ ನಿರ್ಮಿಸಲಾದ ದೇವಾಲಯಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ದೇವಾಲಯಗಳು ಹಿಂದು ಪುರಾಣಗಳನ್ನು ಆಧರಿಸಿದ ಶಿಲ್ಪಗಳಿಂದ ಕೂಡಿವೆ. ಅಗಸ್ತ್ಯ ಸರೋವರದ ತೀರದಲ್ಲಿ ಸುಂದರ ಸೂರ್ಯಾಸ್ತದ ನೋಟ ಪ್ರವಾಸಿಗರಿಗೆ ಆಕರ್ಷಣೆ.

ಬಾದಾಮಿ ಗುಹೆ ದೇವಾಲಯಗಳು: ರಾಕ್-ಕಟ್ ಆರ್ಕಿಟೆಕ್ಚರ್‌ನಲ್ಲಿ ಮಾಸ್ಟರ್‌ಪೀಸ್‌ನ ಪರಂಪರೆ

ಐಹೊಳೆ – ಭಾರತೀಯ ವಾಸ್ತುಶಿಲ್ಪದ ತೊಟ್ಟಿಲು
ಐಹೊಳೆ ಒಂದು ಸಣ್ಣ ಹಳ್ಳಿಯಾದರೂ ನೂರಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳ ತವರೂರು. ಇಲ್ಲಿ ಚಾಲುಕ್ಯ, ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪಗಳ ಮಿಶ್ರಣ ಕಂಡುಬರುತ್ತದೆ. ದುರ್ಗಾ ದೇವಾಲಯ, ಲಾಡ್ ಖಾನ್ ದೇವಾಲಯ ಮತ್ತು ರಾವಣ ಫಾಡಿ ದೇವಾಲಯಗಳು ಪ್ರಮುಖ ಆಕರ್ಷಣೆಗಳಾಗಿವೆ.

ಐಹೊಳೆ ಮತ್ತು ಇದು ಆಕರ್ಷಕ ಮೋಡಿ

ಪಟ್ಟದಕಲ್ಲು
ಬಾದಾಮಿ ಮತ್ತು ಹಂಪಿಯ ಮಧ್ಯದಲ್ಲಿರುವ ಪಟ್ಟದಕಲ್ಲು, ಬೇರೆ ಬೇರೆ ಶೈಲಿಯ ದೇವಾಲಯಗಳ ಜೋಡಣೆಗೆ ಹೆಸರುವಾಸಿ. ಮಲ್ಲಿಕಾರ್ಜುನ, ವಿರೂಪಾಕ್ಷ ಮತ್ತು ಸಂಗಮೇಶ್ವರ ದೇವಾಲಯಗಳು ಇಲ್ಲಿಯ ಇತಿಹಾಸ ಪ್ರಿಯರಿಗೆ ವಿಶೇಷ ಮನರಂಜನೆ.

ಪಟ್ಟದಕಲ್ಲಿನ ಶ್ರೀಮಂತ ಪರಂಪರೆಯ ಅನ್ವೇಷಣೆ -

ಆನೆಗುಂಡಿ – ಪುರಾಣ ಮತ್ತು ಪವಿತ್ರತೆಯ ನಾಡು
ತುಂಗಭದ್ರಾ ನದಿಯ ಉತ್ತರ ದಂಡೆಯಲ್ಲಿರುವ ಈ ಗ್ರಾಮವು ರಾಮಾಯಣದಲ್ಲಿ ಉಲ್ಲೇಖವಾಗಿರುವ ಕಿಷ್ಕಿಂಧಾ ಪ್ರದೇಶವಾಗಿದೆ. ಪಂಪಾ ಸರೋವರ, ಆಂಜನೇಯ ಬೆಟ್ಟ ಹಾಗೂ ನವಬೃಂದಾವನ ಪ್ರಮುಖ ಸ್ಥಳಗಳು.

Gagan Mahal | Sightseeing in Anegundi | Anegundi

ತುಂಗಭದ್ರಾ ಅಣೆಕಟ್ಟು – ನೈಸರ್ಗಿಕ ನೆಮ್ಮದಿ
ಹೊಸಪೇಟೆ ಸಮೀಪವಿರುವ ಈ ಅಣೆಕಟ್ಟು, ಹಸಿರು ಹೊದಿಕೆಯೊಂದಿಗೆ ಪ್ರಕೃತಿಪ್ರಿಯರಿಗೆ ಪರಿಪೂರ್ಣ ಪ್ರವಾಸದ ಅನುಭವ ನೀಡುತ್ತದೆ. ದೋಣಿ ಸವಾರಿ, ಪಿಕ್ನಿಕ್‌ ಹಾಗೂ ನದಿ ದಂಡೆಯ ಸಂಚಾರಕ್ಕೆ ಇದು ಸುಂದರ ಸ್ಥಳವಾಗಿದೆ.

ತುಂಗಭದ್ರಾ ಅಣೆಕಟ್ಟು, ಹೊಸಪೇಟೆ

ಹಂಪಿಗೆ ಹೋದಾಗ ಪ್ರಾಚೀನ ದೇವಾಲಯಗಳನ್ನು ನೋಡೋದೆ ಮುಖ್ಯವಲ್ಲ, ಅದರ ಸುತ್ತಲೂ ಹರಡಿರುವ ಇತಿಹಾಸ, ಶಿಲ್ಪಕಲೆ, ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮವನ್ನು ಕೂಡ ಅನುಭವಿಸಿ. ಇಂತಹ ಪ್ರವಾಸದಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುವುದು ಮಾತ್ರವಲ್ಲ, ಸಂಸ್ಕೃತಿಯ ಬಗ್ಗೆ ಹೊಸ ಪ್ರೇರಣೆಯೂ ಲಭ್ಯವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!