ಪ್ರತಿಯೊಬ್ಬರಿಗೂ ತಮ್ಮ ದೈನಂದಿನ ಜವಾಬ್ದಾರಿಗಳಿಂದ ದೂರ ಹೋಗಿ ಮನಸ್ಸಿಗೆ ತಂಪು ನೀಡುವ ಹಸಿರಿನ ಮಧ್ಯೆ ತಮ್ಮ ದಿನವನ್ನು ಅನುಭವಿಸಲು ಇಷ್ಟವಿರುತ್ತದೆ. ಎಲ್ಲರಿಗೂ ಗೊತ್ತಿರುವ ಊಟಿ, ಮೈಸೂರು ಅಥವಾ ಕೊಡಗು ಮಾತ್ರವಲ್ಲದೆ, ಕರ್ನಾಟಕದಲ್ಲಿ ಬಹುಪಾಲು ಜನರಿಗೆ ತಿಳಿಯದ ಅನೇಕ ಸುಂದರ ಸ್ಥಳಗಳಿವೆ. ಈ ವಿಕೆಂಡ್‌ಅಲ್ಲಿ ಹೊಸ ಅನುಭವಕ್ಕಾಗಿ ಈ ಮೂರು ಅಪರೂಪದ ಸ್ಥಳಗಳಿಗೆ ಭೇಟಿ ನೀಡಬಹುದು.
ಗುಮ್ಮನಾಯಕ ಕೋಟೆ – ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಸಮೀಪದ ಈ ಕೋಟೆ ಸುಮಾರು 150 ಅಡಿ ಎತ್ತರದಲ್ಲಿದೆ. ಈ ಕೋಟೆ ಚಾರಣಪ್ರಿಯರಿಗೆ ಅತ್ಯುತ್ತಮ ಸ್ಥಳ. ಇಲ್ಲಿ ಹನುಮಂತ ಹಾಗೂ ಗಣಪತಿ ದೇವಾಲಯವಿದೆ, ಜೊತೆಗೆ ಪಾಳುಬಿದ್ದ ಕೋಟೆ ಮತ್ತು ಬೆಟ್ಟದ ಶಿಖರದವರೆಗೆ ಸಾಗುವ ದಾರಿ ಈ ಪ್ರವಾಸವನ್ನು ರೋಮಾಂಚಕಗೊಳಿಸುತ್ತದೆ.
ಶರಾವತಿ ಕಾಂಡ್ಲಾ ವಾಕ್‌ವೇ – ಹೊನ್ನಾವರ:
ಅಳಿವಿನಂಚಿನಲ್ಲಿರುವ ಕಾಂಡ್ಲಾ ಸಸ್ಯವರ್ಗದ ಬಗ್ಗೆ ಅರಿವು ಮೂಡಿಸಲು ಸ್ಥಾಪಿಸಲಾದ ಈ ವಾಕ್ ವೇ, ಮ್ಯಾಂಗ್ರೋವ್ ಕಾಡುಗಳ ನಡುವೆ ಮರದ ದಾರಿಯಾಗಿದೆ. ಬೆಳಿಗ್ಗೆ 6 ರಿಂದ ಸಂಜೆ 6:30ರ ವರೆಗೆ ಪ್ರವೇಶ, ಮಾತ್ರ 10 ರೂಪಾಯಿ ಶುಲ್ಕ. ಪ್ರಕೃತಿಪ್ರಿಯರಿಗೆ ಇದು ನಿಜವಾದ ಪರಿಪೂರ್ಣತೆಯ ಸ್ಥಳ.
ಕೂರ್ಮಗಡ ದ್ವೀಪ – ಕಾರವಾರ:
ಅರಬ್ಬೀ ಸಮುದ್ರದಲ್ಲಿರುವ ಈ ಆಮೆಯಾಕಾರದ ದ್ವೀಪ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ದೋಣಿಯ ಮೂಲಕ ಮಾತ್ರ ತಲುಪಬಹುದಾದ ಈ ಸ್ಥಳದಲ್ಲಿ ನರಸಿಂಹ ದೇವಾಲಯ, ಬೀಚ್, ಟ್ರೆಕ್ಕಿಂಗ್, ಸ್ನಾರ್ಕ್ಲಿಂಗ್ ಮತ್ತು ನಕ್ಷತ್ರ ವೀಕ್ಷಣೆ ಮುಂತಾದ ಚಟುವಟಿಕೆಗಳಿವೆ. ಅಕ್ಟೋಬರ್‌ನಿಂದ ಮೇವರೆಗಿನ ಸಮಯ ಪ್ರವಾಸಕ್ಕೆ ಸೂಕ್ತ.