ಕೆಲಸದ ಒತ್ತಡ, ವಾಹನಗಳ ಹೋರಾಟ, ಟೈಮ್‌ಲೈನ್‌ಗಳ ಜಾಗದಲ್ಲಿ ಬಿಕ್ಕಟ್ಟಾದ ಜೀವನಕ್ಕೆ ರಿಲೀಫ್ ಬೇಕೆನಿಸುತ್ತಿದ್ದರೆ, ಈ ವೀಕೆಂಡ್‌ನ್ನು ಸಣ್ಣದಾದರೂ ವಿಶೇಷ ಟ್ರಿಪ್‌ಗಾಗಿ ಬಳಸಿಕೊಳ್ಳಿ. ಬೆಂಗಳೂರಿನಲ್ಲಿಯೇ ಅಥವಾ ಹತ್ತಿರದಲ್ಲೇ ಕೆಲವು ಅಪರೂಪದ ಸೌಂದರ್ಯಯುತ ಸ್ಥಳಗಳಿವೆ. ಪ್ರವಾಸಕ್ಕೂ, ಮನಸ್ಸಿಗೆ ನೆಮ್ಮದಿಗೂ ಪರ್ಫೆಕ್ಟ್ ಇದು.
ಚೋಟಾ ಲಡಾಖ್ (ದೊಡ್ಡ ಆಯುರ್)
ಬೆಂಗಳೂರು ನಗರದಿಂದ ಕೇವಲ 60 ಕಿಮೀ ದೂರದಲ್ಲಿರುವ ಈ ಸ್ಥಳವು ಕಲ್ಲು ಕ್ವಾರಿ ಪ್ರದೇಶ. ಮಳೆ ನೀರಿನಿಂದ ತುಂಬಿದ ಗುಡ್ಡಗುಡಿಯ ತಾಣಗಳು ಲಡಾಖ್‌ನ ಪ್ರದೇಶವನ್ನು ಹೋಲುತ್ತವೆ. ಹೀಗಾಗಿ ಇದಕ್ಕೆ ‘ಚೋಟಾ ಲಡಾಖ್’ ಎನ್ನಲಾಗಿದೆ. ಬೈಕ್ ರೈಡಿಂಗ್ ಮತ್ತು ಲಾಂಗ್ ಡ್ರೈವ್ ಪ್ರಿಯರಿಗಿದು ಪರಿಪೂರ್ಣ. ಇಲ್ಲಿನ ಶುದ್ಧ ನೀರಿನ ಸರೋವರ, ಹಿಮಶಿಖರದ ಲುಕ್ ನೀಡುವ ಕಲ್ಲುಕೋರೆಗಳ ನಡುವೆ ಒಂದು ದಿನ ಕಳೆದರೆ, ಮನಸ್ಸು ಸಂಪೂರ್ಣ ರಿಫ್ರೆಶ್ ಆಗುತ್ತದೆ. ಬೆಳಿಗ್ಗೆ ಅಥವಾ ಮುಸ್ಸಂಜೆಯಲ್ಲಿ ಭೇಟಿ ನೀಡುವುದು ಉತ್ತಮ.
ಮೈತ್ರೇಯ ಬುದ್ಧ ಪಿರಮಿಡ್, ಕೆಬ್ಬೆದೊಡ್ಡಿ
ಬೆಂಗಳೂರು ನಗರದ ಆರ್ಭಟದಿಂದ ಸ್ವಲ್ಪ ದೂರದಲ್ಲಿ, ಧ್ಯಾನ, ಶಾಂತಿ ಮತ್ತು ಆತ್ಮಚಿಂತನೆಗೆ ಏಕೈಕ ತಾಣ ಎನ್ನಬಹುದಾದ ಸ್ಥಳ ಇದು. ಸುಮಾರು 102 ಅಡಿ ಎತ್ತರದ ಈ ಪಿರಮಿಡ್ ಒಂದೇ ಸಮಯದಲ್ಲಿ 5,000 ಜನರಿಗೆ ಧ್ಯಾನಕ್ಕೆ ಅವಕಾಶ ನೀಡುತ್ತದೆ. ಹಚ್ಚಹಸಿರು ಪರಿಸರ, ಶುದ್ಧ ಗಾಳಿ ಮತ್ತು ಕಲ್ಲಿನ ಬೆಟ್ಟಗಳ ನಡುವೆ ಇರುವ ಈ ಧ್ಯಾನ ಕೇಂದ್ರದಲ್ಲಿ ಒಂದು ದಿನ ಕಳೆದರೆ ಮನಸ್ಸು ಶಾಂತವಾಗುತ್ತದೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಇಲ್ಲಿ ಪ್ರವೇಶ ಇದೆ.
ಡೆಲ್ಟಾ ಬೀಚ್ – ಕೋಡಿ ಬೆಂಗ್ರೆ
ಬೀಚ್ ಲವರ್ಸ್‌ಗಾಗಿ ಉಡುಪಿಯ ಹತ್ತಿರದಲ್ಲೇ ಇರುವ ಈ ತಾಣ ದೇವರು ಕೊಟ್ಟ ವರವೇ ಸರಿ. ನದಿಗಳು ಸಮುದ್ರದಲ್ಲಿ ಚುಂಬಿಸುವ ಈ ದರ್ಶನ, ನೈಸರ್ಗಿಕವಾಗಿ ಅತ್ಯಂತ ಅಪರೂಪ. ಬೀಚ್ ಸ್ಟೋಲಿಂಗ್, ಕಯಾಕಿಂಗ್, ಹೌಸ್ ಬೋಟ್ ರೈಡ್ ಎಲ್ಲವನ್ನೂ ಅನುಭವಿಸಬಹುದಾದ ಈ ತಾಣಕ್ಕೆ ಕುಟುಂಬದೊಂದಿಗೆ ಹೋಗುವುದೂ ಒಳ್ಳೆಯ ಆಯ್ಕೆ.
ನಿರಂತರ ಕೆಲಸದ ನಡುವೆ, ಪ್ರಕೃತಿಯ ಕಣಿವೆಗಳಲ್ಲಿ ಕೆಲ ಗಂಟೆಗಳ ಕಾಲ ಕಳೆದರೆ ಅದೇ ಒಂದು ದೊಡ್ಡ ಉಪಚಾರ. ವೀಕೆಂಡ್‌ಗಾಗಿ ಈ ಮೂರು ತಾಣಗಳೊಂದನ್ನು ನಿಮ್ಮ ಪ್ಲಾನ್‌ನಲ್ಲಿ ಸೇರಿಸಿ. ಖರ್ಚು ಕಡಿಮೆ, ಪ್ರಯಾಣ ಸುಲಭ, ಶಾಂತಿ ಗ್ಯಾರಂಟಿ!