ಪ್ರಯಾಣ ಅಂದರೆ ಹೊಸ ಅನುಭವ, ಹೊಸ ಸ್ಥಳಗಳ ಸೌಂದರ್ಯ ಮತ್ತು ನಿತ್ಯದ ಬದುಕಿನಿಂದ ಒಂದು ವಿಶ್ರಾಂತಿ. ಆದರೆ ಕೆಲವರಿಗೆ ಟ್ರಾವೆಲಿಂಗ್ ವೇಳೆ ಹೊಟ್ಟೆ ಸಂಬಂಧಿತ ಸಮಸ್ಯೆಗಳು ಬಂದುಬಿಡುತ್ತವೆ. ಅನಿಲ, ಮಲಬದ್ಧತೆ ಅಥವಾ ಜೀರ್ಣಕ್ರಿಯೆಯ ಅಸಮತೋಲನ. ಈ ಸಮಸ್ಯೆಗಳ ಪ್ರಮುಖ ಕಾರಣ ಪ್ರಯಾಣದ ಸಮಯದಲ್ಲಿ ಆಹಾರ ಪದ್ಧತಿಯ ಬದಲಾವಣೆ, ನೀರಿನ ಕೊರತೆ ಹಾಗೂ ಹೊರಗಿನ ಅಸುರಕ್ಷಿತ ಆಹಾರ. ಆದರೂ ಸ್ವಲ್ಪ ಎಚ್ಚರಿಕೆ ಮತ್ತು ಸರಿಯಾದ ಅಭ್ಯಾಸಗಳಿಂದ ನಿಮ್ಮ ಪ್ರತಿಯೊಂದು ಟ್ರಿಪ್ ಸಹ ಸುಖಕರ ಹಾಗೂ ಆರೋಗ್ಯಕರವಾಗಿರಬಹುದು.
- ಪ್ರಯಾಣಕ್ಕೂ ಮುನ್ನ ಹಗುರವಾದ ಆಹಾರ ಸೇವಿಸಿ: ಹೆಚ್ಚು ಎಣ್ಣೆಯುಕ್ತ ಅಥವಾ ಕರಿದ, ಹುರಿದ ಆಹಾರದಿಂದ ದೂರವಿರಿ. ಮೊಸರು-ಅನ್ನ, ಹಣ್ಣುಗಳು ಅಥವಾ ಓಟ್ಸ್ ತರಹದ ಹಗುರವಾದ ಆಹಾರಗಳು ಜೀರ್ಣಿಸಲು ಸುಲಭವಾಗುತ್ತವೆ ಮತ್ತು ಹೊಟ್ಟೆ ತಂಪಾಗಿರುತ್ತವೆ.
- ಸಾಕಷ್ಟು ನೀರು ಕುಡಿಯಿರಿ: ಪ್ರಯಾಣದ ವೇಳೆಯಲ್ಲಿ ನೀರಿನ ಕೊರತೆಯಿಂದ ದೇಹದ ಹೈಡ್ರೇಷನ್ ಕಡಿಮೆ ಆಗುತ್ತದೆ. ಸದಾ ಶುದ್ಧ ನೀರಿನ ಬಾಟಲ್ ಕೊಂಡೊಯ್ಯಿರಿ ಮತ್ತು ನಿಂಬೆ ನೀರು ಅಥವಾ ಎಳ ನೀರನ್ನು ಸಮಯಕ್ಕೆ ಕುಡಿಯಿರಿ.
- ಬೀದಿ ಆಹಾರವನ್ನು ಎಚ್ಚರಿಕೆಯಿಂದ ಸೇವಿಸಿ : ಸ್ವಚ್ಛತೆಯುಳ್ಳ ಸ್ಥಳಗಳಲ್ಲಿ ಮಾತ್ರ ಆಹಾರ ಸೇವಿಸಿ. ಅತಿಯಾಗಿ ಮಸಾಲೆಯ ಅಥವಾ ಹುರಿದ ಆಹಾರವನ್ನು ತಪ್ಪಿಸಿ.
- ಅಗತ್ಯ ಔಷಧಿಗಳನ್ನು ಕೊಂಡೊಯ್ಯಿರಿ: ಗ್ಯಾಸ್ ಅಥವಾ ವಾಂತಿ ನಿವಾರಕ ಔಷಧಿಗಳು, ORS, ಪ್ರೋಬಯಾಟಿಕ್ ಕ್ಯಾಪ್ಸುಲ್‌ಗಳು ಪ್ರಯಾಣದಲ್ಲಿ ಅಗತ್ಯವಾದವು. ಅವು ತುರ್ತು ಸಂದರ್ಭಗಳಲ್ಲಿ ಸಹಾಯಕವಾಗುತ್ತವೆ.
- ವಿರಾಮ ಪಡೆಯಿರಿ: ದೀರ್ಘ ಪ್ರಯಾಣದಲ್ಲಿ ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಂಡು ಸಣ್ಣ ವಾಕ್ ಮಾಡಿ. ಇದು ರಕ್ತ ಸಂಚಾರ ಹಾಗೂ ಜೀರ್ಣಕ್ರಿಯೆಗೆ ಸಹಾಯಕ.
- ಮೊಸರು ಮತ್ತು ಫೈಬರ್ ಆಹಾರ ಸೇರಿಸಿ: ಮೊಸರು, ಸಲಾಡ್, ಧಾನ್ಯಗಳು ಅಥವಾ ಓಟ್ಸ್‌ಗಳು ಹೊಟ್ಟೆಯ ಆರೋಗ್ಯ ಕಾಪಾಡುತ್ತವೆ.
- ಕೈ ಸ್ವಚ್ಛತೆ ಕಾಪಾಡಿ: ಹ್ಯಾಂಡ್ ಸ್ಯಾನಿಟೈಸರ್ ಅಥವಾ ವೈಪ್ಸ್ ಬಳಸಿ. ಊಟಕ್ಕೂ ಮುನ್ನ ಕೈ ತೊಳೆಯುವ ಅಭ್ಯಾಸವು ಸೋಂಕುಗಳಿಂದ ರಕ್ಷಿಸುತ್ತದೆ.

