ಬೀಚ್ ಪ್ರಿಯರಿಗೆ ಗೋವಾ ಆಕರ್ಷಣೆಯ ಕೇಂದ್ರವಾಗಿದ್ದು, ಕೇವಲ ಭಾರತೀಯರಿಗಷ್ಟೇ ಅಲ್ಲ, ವಿದೇಶಿಗರಿಗೂ ಪ್ರಿಯವಾದ ತಾಣವಾಗಿದೆ. ಇಲ್ಲಿ ಕಂಡುಬರುವ ನೀಲಿ ಸಮುದ್ರತೀರಗಳು, ಹಳೆಯ ಕೋಟೆಗಳು, ಜಲಪಾತಗಳು, ನೈಟ್ ಲೈಫ್, ಮತ್ತು ಸಾಹಸ ಚಟುವಟಿಕೆಗಳು ಪ್ರವಾಸಿಗರನ್ನು ಸೆಳೆಯುತ್ತವೆ.
10,000 ಬಜೆಟ್‌ನಲ್ಲಿ ಗೋವಾ ಪ್ರವಾಸ ಸಾಧ್ಯವಿಲ್ಲ ಎಂದುಕೊಳ್ಳುವವರು ಇತ್ತೀಚೆಗೆ ಏನನ್ನೂ ಪರಿಶೀಲಿಸಿಲ್ಲ ಎಂದೇ ಹೇಳಬೇಕು. ಬಜೆಟ್‌ಗೆ ಹೊಂದುವ ಹೋಂಸ್ಟೇಗಳು, ಕಡಲತೀರದ ಹತ್ತಿರ ಉಳಿಯುವ ಅವಕಾಶಗಳು ಎಲ್ಲವೂ ಇಲ್ಲಿವೆ.
ವಾಸ್ತವ್ಯ: ಗೋವಾದಲ್ಲಿ1200ರಿಂದ 25000ದ ವರೆಗೆ ವಿವಿಧ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳು ಲಭ್ಯವಿವೆ. ಕಡಲತೀರದ ಸಮೀಪದಲ್ಲಿ ಉಳಿಯಲು ಹೆಚ್ಚು ಜನರು ಆದ್ಯತೆ ನೀಡುತ್ತಾರೆ.
ಸಾಹಸ ಚಟುವಟಿಕೆಗಳು: ಪ್ಯಾರಾಸೈಲಿಂಗ್, ಜೆಟ್ ಸ್ಕೀ, ಸ್ಕೂಬಾ ಡೈವಿಂಗ್, ಕಯಾಕಿಂಗ್, ಬನಾನಾ ರೈಡ್, ಜಿಪ್ ಲೈನಿಂಗ್, ಟ್ರೆಕ್ಕಿಂಗ್ ಸೇರಿದಂತೆ ಹಲವು ವಾಟರ್ ಸ್ಪೋರ್ಟ್‌ಗಳನ್ನು ಪ್ರಯತ್ನಿಸಬಹುದು.
ನೈಟ್ ಲೈಫ್: ನೈಟ್ ಪಾರ್ಟಿಗಳಿಗೆ ಹೆಸರುವಾಸಿಯಾದ ವಾಗೇಟಾರ್ ಬೀಚ್, ಅರ್ಪೋರಾ ಬೀಚ್, ಸೈಲೆಂಟ್ ನಾಯ್ಸ್ ಕ್ಲಬ್‌ಗಳಲ್ಲಿ ನೈಟ್ ಲೈಫ್ ಎಂಜಾಯ್ ಮಾಡಬಹುದು.
ಆಕರ್ಷಣೆಗಳು: ಕ್ಯಾಲಂಗುಟ್, ಬಾಗಾ, ಅಂಜುನಾ, ಕ್ಯಾಂಡೋಲಿಮ್ ಬೀಚ್, ಪಲೋಲೆಂ, ದೂಧ್‌ಸಾಗರ್ ಜಲಪಾತ, ಹಳೆಯ ಗೋವಾ, ನೇತ್ರಾವಳಿ ವನ್ಯಜೀವಿ ಅಭಯಾರಣ್ಯ, ಸ್ಪ್ಲಾಶ್‌ಡೌನ್ ವಾಟರ್ ಪಾರ್ಕ್‌ಗಳಿಗೆ ಭೇಟಿ ನೀಡುವುದು ಮರೆಯಬೇಡಿ.
10,000 ಬಜೆಟ್‌ನಲ್ಲೂ ಗೋವಾ ಪ್ರವಾಸ ರೋಮಾಂಚಕವಾಗಿರಬಹುದು. ಸರಿಯಾದ ಯೋಜನೆ, ಮುಂಗಡ ಬುಕ್ಕಿಂಗ್ ಮತ್ತು ಸ್ಥಳೀಯ ಸಂಚಾರ ಆಯ್ಕೆಗಳಿಂದ ಖರ್ಚನ್ನು ನಿಯಂತ್ರಿಸಬಹುದು. ಸ್ನೇಹಿತರು ಅಥವಾ ಕುಟುಂಬದೊಂದಿಗೆ ಈ ಚಿಕ್ಕ ಪ್ರವಾಸ ನಿಮ್ಮ ನೆನಪಿನಲ್ಲಿ ಸದಾ ಉಳಿಯುವಂತಿರುತ್ತದೆ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)