ವಿದೇಶ ಪ್ರವಾಸವೆಂದರೆ ಬಹುಪಾಲು ಜನರಿಗೆ ಅದರ ಖರ್ಚು, ವೀಸಾ, ಪಾಸ್ ಪೋರ್ಟ್ ಮತ್ತು ಮುಖ್ಯವಾಗಿ ಫ್ಲೈಟ್ ಟಿಕೆಟ್ ಎಂಬ ಉದ್ದ ಕಥೆ ನೆನಪಾಗಿ ಬಿಡುತ್ತದೆ. ಆದರೆ ನಿಮಗೆ ಗೊತ್ತಾ? ವಿಮಾನದಲ್ಲಿ ಏರುವ ಅಗತ್ಯವಿಲ್ಲದೆ ಭಾರತದಿಂದಲೇ ಕೆಲವು ದೇಶಗಳಿಗೆ ಸುಲಭವಾಗಿ ಪ್ರವಾಸ ಹೋಗಬಹುದು. ಅದೂ ಬಹಳ ಕಡಿಮೆ ಖರ್ಚಿನಲ್ಲಿ!
ಭಾರತವು ತನ್ನ ಗಡಿಯನ್ನು ಏಳು ವಿವಿಧ ದೇಶಗಳೊಂದಿಗೆ ಹಂಚಿಕೊಂಡಿದೆ. ಅವುಗಳಲ್ಲಿ ಕೆಲವು ದೇಶಗಳಿಗೆ ನೀವು ವಿಮಾನವಿಲ್ಲದೆ ಭೂಮಾರ್ಗದಲ್ಲಿ ಅಥವಾ ಕಡಲಮಾರ್ಗದಲ್ಲಿ ಪ್ರವೇಶಿಸಬಹುದಾಗಿದೆ. ಈ ದೇಶಗಳಿಗೆ ಪಾಸ್‌ಪೋರ್ಟ್ ಇಲ್ಲದೆಯೂ ಹೋಗುವ ಅವಕಾಶವಿದೆ, ಅಥವಾ ಪಾಸ್‌ಪೋರ್ಟ್ ಇದ್ದರೂ ವಿಮಾನದ ಅವಶ್ಯಕತೆ ಇಲ್ಲ. ಹಾಗಾದರೆ ಇಲ್ಲಿದೆ ನಿಮಗೆ ವಿಮಾನವಿಲ್ಲದೇ ಭೇಟಿಯಾಗಬಹುದಾದ ವಿದೇಶಗಳ ಬಗ್ಗೆ ಮಾಹಿತಿ.
ನೇಪಾಳ
ಭಾರತದ ಅತ್ಯಂತ ಹತ್ತಿರದ ಮತ್ತು ಸುಲಭವಾಗಿ ಭೇಟಿನೀಡಬಹುದಾದ ದೇಶ. ಬಿಹಾರ ಅಥವಾ ಉತ್ತರಪ್ರದೇಶದ ಗಡಿಯಿಂದ ನೀವು ನೇಪಾಳ ಪ್ರವೇಶಿಸಬಹುದು. ವೀಸಾ ಬೇಕಾಗಿಲ್ಲ. ಪಶುಪತಿನಾಥ ದೇವಾಲಯ, ಕಾಠ್ಮಂಡು, ಪೋಕ್ಹರಾ ಹಾಗೂ ಎವರೆಸ್ಟ್ ಪರ್ವತದ ನೋಟ ವಿಹಂಗಮವಾಗಿದೆ. – ಇಲ್ಲಿಯ ಪ್ರವಾಸ ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
ಭೂತಾನ್
ಪಶ್ಚಿಮ ಬಂಗಾಳದ ಜೈಗಾಂವ್ ಗಡಿಯ ಮೂಲಕ ಭಾರತದಿಂದ ಭೂತಾನ್ ಗೆ ಭೇಟಿನೀಡಬಹುದು. ಈ ದೇಶ ಪ್ರವೇಶಿಸಲು ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿ ಸಾಕು. ಮಧುರ ಹವಾಮಾನ, ಶಾಂತಿಯುತ ಪರಿಸರ ಮತ್ತು ಉತ್ಕೃಷ್ಟ ಪ್ರವಾಸಿ ಸ್ಥಳಗಳು ಇಲ್ಲಿನ ಹೈಲೈಟ್.
ಮ್ಯಾನ್ಮಾರ್
ಮಣಿಪುರ ಮತ್ತು ಮಿಜೋರಾಂ ಗಡಿಯ ಮೂಲಕ ಮ್ಯಾನ್ಮಾರ್ ಗೆ ಹೋಗಲು ಸಾಧ್ಯ. ಪಾಸ್‌ಪೋರ್ಟ್ ಹಾಗೂ ವಿಶೇಷ ಮ್ಯಾನ್ಮಾರ್ ಭೂಪಥ ವೀಸಾ ಅಗತ್ಯ. ಥೈಲ್ಯಾಂಡ್ ಪ್ರವಾಸಕ್ಕೆ ಮ್ಯಾನ್ಮಾರ್ ಒಂದು ಪ್ರವೇಶದ್ವಾರವೂ ಹೌದು. ನವೆಂಬರ್‌ನಿಂದ ಮಾರ್ಚ್ ತಿಂಗಳುಗಳವರೆಗೆ ಪ್ರವಾಸಕ್ಕೆ ಉತ್ತಮ ಸಮಯ.
ಚೀನಾ (ಟಿಬೆಟ್ ಮೂಲಕ)
ವಿಮಾನವಿಲ್ಲದೇ ಚೀನಾ ಹೋಗುವ ಅನನ್ಯ ಮಾರ್ಗವೆಂದರೆ ನಾಥು ಲಾ ಪಾಸ್. ಇದು ಸಿಕ್ಕಿಂ ಮೂಲಕ ಟಿಬೆಟ್‌ಗೆ ಸಂಪರ್ಕ ಕಲ್ಪಿಸುತ್ತದೆ. ಸಮುದ್ರಮಟ್ಟದಿಂದ 14,000 ಅಡಿಗಳ ಎತ್ತರದಲ್ಲಿರುವ ಈ ಪಾಸ್ ಮೂಲಕ ಪ್ರವಾಸ ಮಾಡಲು ವಿಶೇಷ ಪರವಾನಗಿ ಬೇಕು. ಆದರೆ ಇದರ ಅನುಭವ ಸ್ಮರಣೀಯ.