ಪ್ರಯಾಣಿಕರೇ ಗಮನಿಸಿ, ರಾಜ್ಯ ಸರ್ಕಾರದಿಂದ ‘ಭಾರತ ಗೌರವ ಕಾಶಿ ದರ್ಶನ’ ಯಾತ್ರೆ, 9 ದಿನಗಳ ಪ್ರವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ ಸಹಯೋಗದೊಂದಿಗೆ, ಕರ್ನಾಟಕದ ನಿವಾಸಿಗಳಿಗಾಗಿ ವಿಶೇಷವಾಗಿ ‘ಭಾರತ ಗೌರವ ಪ್ರವಾಸಿ ರೈಲು ಯೋಜನೆ’ ಅಡಿಯಲ್ಲಿ ವಿಶೇಷ ಪ್ರವಾಸ ಆಯೋಜಿಸಿದೆ.

ಈ ಕಾಶಿ ದರ್ಶನ ಯಾತ್ರೆ 9 ದಿನಗಳ ಪ್ರವಾಸವಾಗಿದ್ದು ಸೆಪ್ಟೆಂಬರ್ 21ರಿಂದ 29, 2025ರವರೆಗೆ ನಡೆಯಲಿದೆ. ಯಾತ್ರೆ ಯಶವಂತಪುರ/ಎಸ್‌ಎಂವಿಟಿ ಬೆಂಗಳೂರಿನಿಂದ ಪ್ರಾರಂಭವಾಗಲಿದ್ದು, ಯಶವಂತಪುರ/ಎಸ್ಎಂವಿಟಿ ಬೆಂಗಳೂರು, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಯಾತ್ರಾರ್ಥಿಗಳು ರೈಲು ಹತ್ತಲು ಅವಕಾಶವಿದೆ.

ಯಾವೆಲ್ಲಾ ಸ್ಥಳಗಳಿಗೆ ಭೇಟಿ?

ಅಯೋಧ್ಯೆ: ರಾಮ ಮಂದಿರ ಮತ್ತು ಹನುಮಾನ್ ಗಡಿ.
ಗಯಾ ಮತ್ತು ಬೋಧಗಯಾ: ವಿಷ್ಣುಪಾದ ದೇವಾಲಯ ಮತ್ತು ಮಹಾಬೋಧಿ ದೇವಾಲಯ.
ಪ್ರಯಾಗರಾಜ್: ತ್ರಿವೇಣಿ ಸಂಗಮ ಮತ್ತು ಹನುಮಾನ್ ದೇವಸ್ಥಾನ.
ವಿಶೇಷ ಸಬ್ಸಿಡಿ: ಪ್ರತಿ ವ್ಯಕ್ತಿಗೆ ಪ್ರವಾಸದ ವೆಚ್ಚ ₹22,500. ರಾಜ್ಯ ಸರ್ಕಾರ ಕರ್ನಾಟಕದ ನಿವಾಸಿಗಳಿಗೆ ಮಾತ್ರ ವಿಶೇಷವಾಗಿ ₹7,500 ಸಬ್ಸಿಡಿ ನೀಡಿದ್ದು, ಯಾತ್ರೆಯನ್ನು ಮತ್ತಷ್ಟು ಕೈಗೆಟುಕುವಂತೆ ಮಾಡಿದೆ.

ಏನೆಲ್ಲಾ ಫೆಸಿಲಿಟಿಸ್‌?

ಭಾರತ್ ಗೌರವ್ ಪ್ರವಾಸಿ ರೈಲಿನಲ್ಲಿ ಮೂರನೇ ಎಸಿ ದರ್ಜೆಯಲ್ಲಿ ಪ್ರಯಾಣ.
ತಂಗುವ ಸ್ಥಳಗಳಲ್ಲಿ ಅವಳಿ/ತ್ರಿವಳಿ ಜನರು ಹಂಚಿಕೊಳ್ಳುವ ಆಧಾರದ ಮೇಲೆ ಎಸಿರಹಿತ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ.
ಯಾತ್ರಾ ಸ್ಥಳಗಳಲ್ಲಿ ಸ್ನಾನ ಮತ್ತು ವಾಸ್ತವ್ಯಕ್ಕೆ ಎಸಿ ರಹಿತ ಕೊಠಡಿಗಳ ವ್ಯವಸ್ಥೆ.
ಎಲ್ಲಾ ಊಟಗಳು (ಸಸ್ಯಾಹಾರಿ ಮಾತ್ರ) ಈ ಪ್ಯಾಕೇಜ್‌ನಲ್ಲಿ ಸೇರಿವೆ.
ಎಸಿ ರಹಿತ ಬಸ್‌ಗಳ ಮೂಲಕ ಪ್ರವಾಸ ಮತ್ತು ಸ್ಥಳ ವೀಕ್ಷಣೆ.
ಪ್ರತಿ ಕೋಚ್‌ಗೆ ಪ್ರವಾಸ ಮಾರ್ಗದರ್ಶಕರ ಸೇವೆ.
ಎಲ್ಲಾ ಪ್ರಯಾಣಿಕರಿಗೆ ಪ್ರಯಾಣ ವಿಮೆ.
IRCTC ರೈಲು ವ್ಯವಸ್ಥಾಪಕ.
ರೈಲಿನಲ್ಲಿ ಭದ್ರತಾ ವ್ಯವಸ್ಥೆ ಮತ್ತು ಎಲ್ಲಾ ಅನ್ವಯಿಕ ತೆರಿಗೆಗಳನ್ನು ಒಳಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!