March 4, 2026
Wednesday, March 4, 2026
spot_img

ರಾಮನಗರ ಟು ಬೆಂಗಳೂರು ಪ್ರಯಾಣ ಈಗ ಮತ್ತಷ್ಟು ಸುಲಭ: ರಸ್ತೆಗಿಳಿದ ಬಿಎಂಟಿಸಿ ‘ವಜ್ರ’ ಸಂಚಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಲೈಫ್‌ಲೈನ್ ಆಗಿರುವ ಬಿಎಂಟಿಸಿ (BMTC) ಇದೀಗ ತನ್ನ ಗಡಿಯನ್ನು ದಾಟಿ ನೆರೆಯ ಜಿಲ್ಲೆಗಳಿಗೂ ಲಗ್ಗೆ ಇಟ್ಟಿದೆ. ಈವರೆಗೆ ಕೇವಲ 40 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ಗಳು, ಈಗ 80 ಕಿ.ಮೀ ದೂರದವರೆಗೂ ವಿಸ್ತರಣೆಗೊಂಡಿವೆ. ಈ ಮಹತ್ವದ ಬದಲಾವಣೆಯ ಮೊದಲ ಭಾಗವಾಗಿ ರಾಮನಗರ ಮತ್ತು ಕನಕಪುರಕ್ಕೆ ಅತ್ಯಾಧುನಿಕ ಎಸಿ ಬಸ್ ಸೇವೆಗೆ ಚಾಲನೆ ನೀಡಲಾಗಿದೆ.

ರಾಮನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು 6 ಹೊಸ ಹವಾನಿಯಂತ್ರಿತ (AC) ಬಸ್‌ಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ‘ವಜ್ರ’ ಶ್ರೇಣಿಯ ಈ ಎಸಿ ಬಸ್‌ಗಳು ರಾಮನಗರದಿಂದ ಬೆಂಗಳೂರಿಗೆ ನಾನ್-ಸ್ಟಾಪ್ ಆಗಿ ಸಂಚರಿಸಲಿವೆ.

ಪ್ರಮುಖ ಮಾರ್ಗಗಳು:

ರಾಮನಗರ ⇄ ಬೆಂಗಳೂರು (ಮೆಜೆಸ್ಟಿಕ್/ಮಾರ್ಕೆಟ್)

ಬನಶಂಕರಿ ⇄ ಕನಕಪುರ

ಸದ್ಯ ರಾಮನಗರದವರೆಗೆ ಆರಂಭವಾಗಿರುವ ಈ ಸೇವೆಯನ್ನು ಮುಂದಿನ ದಿನಗಳಲ್ಲಿ ‘ಬೊಂಬೆ ನಗರಿ’ ಚನ್ನಪಟ್ಟಣದವರೆಗೂ ವಿಸ್ತರಿಸುವ ಚಿಂತನೆ ಇದೆ ಎಂದು ತಿಳಿದುಬಂದಿದೆ.

ಪ್ರತಿನಿತ್ಯ ಕೆಲಸ ಮತ್ತು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬರುವ ಸಾವಿರಾರು ಜನರಿಗೆ ಈ ವೇಗದ ಸಂಚಾರ ವರದಾನವಾಗಲಿದೆ.

ಬಿಎಂಟಿಸಿಯ ಸಾಮಾನ್ಯ ಎಸಿ ದರಗಳೇ ಅನ್ವಯವಾಗಲಿದ್ದು, ಕೆಎಸ್‌ಆರ್‌ಟಿಸಿಗೆ ಹೋಲಿಸಿದರೆ ಪ್ರಯಾಣಿಕರಿಗೆ ಪಾಸ್ ಸೌಲಭ್ಯದ ಮೂಲಕ ಹಣ ಉಳಿತಾಯವಾಗಲಿದೆ. (ದರಗಳ ಅಧಿಕೃತ ಪಟ್ಟಿಯನ್ನು ಬಿಎಂಟಿಸಿ ಶೀಘ್ರವೇ ನಿಲ್ದಾಣಗಳಲ್ಲಿ ಪ್ರಕಟಿಸಲಿದೆ).

ಕೆಎಸ್‌ಆರ್‌ಟಿಸಿ ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದ ಜನರಿಗೆ ಈಗ ಬಿಎಂಟಿಸಿಯ ನಿಗದಿತ ಸಮಯದ ಸೇವೆ ಲಭ್ಯವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !