ಹೊಸದಿಗಂತ ವರದಿ ಚಿಕ್ಕಮಗಳೂರು :
ಭಾರೀ ಮಳೆಯಿಂದಾಗಿ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಎನ್ ಆರ್ ಪುರ ತಾಲೂಕಿನ ಎಲೆಕಲ್ ಘಾಟಿ ಎಂಬಲ್ಲಿ ನಡೆದಿದೆ.
ಬಾಳೆಹೊನ್ನೂರು ಸಮೀಪದ ಕಡಬಗೆರೆ ನಿವಾಸಿ 50 ವರ್ಷದ ಆನಿಲ್ ರುಝಾರಿಯೋ ಮೃತ ವ್ಯಕ್ತಿಯಾಗಿದ್ದು, ಬೈಕ್ ನಲ್ಲಿ ಪ್ರಯಾಣಿಸುವಾಗ ತಲೆಯಮೇಲೆ ಮರದ ಕೊಂಬೆ ಬಿದ್ದಿದೆ.
ತೀವ್ರ ಗಾಯಗೊಂಡಿದ್ದ ಅವರನ್ನು ಬಾಳೆಹೊನ್ನೂರು ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.