ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ನಡು ರಸ್ತೆಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡಿದೆ.
ಬಡವಾಡ ಹರೋಲಿ ತೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಸರಿ ಸುಮಾರು ಹತ್ತು ಅಡಿಯಷ್ಟು ಉದ್ದದ ಮೊಸಳೆ ಪ್ರತ್ಯಕ್ಷವಾಗಿದೆ.
ರಾತ್ರಿ ಹೊತ್ತು ಹಳ್ಳದ ರಸ್ತೆ ಮೇಲೆ ಮೊಸಳೆ ಕಾಣಿಸಿಕೊಳ್ಳುತ್ತಿದ್ದು, ಕೃಷ್ಣಾ ನದಿ ಪ್ರವಾಹ ಬಂದು ಹೋದ ಮೇಲೆ ನದಿ ತೀರದ ಗ್ರಾಮಸ್ಥರಲ್ಲಿ ಮೊಸಳೆ ಆತಂಕ ಹೆಚ್ಚಾಗಿದೆ.