ಕೆಲವರು ರೀಲ್ಸ್ ಸೇರಿದಂತೆ ನಾನಾ ರೀತಿಯ ವಿಡಿಯೋ ಮಾಡಿ ಫೇಮಸ್ ಆಗಲು ನೋಡುತ್ತಾರೆ. ಇನ್ನು ಕೆಲವರು ಒಂದೇ ಒಂದು ವಿಡಿಯೋದಿಂದನೇ ಫೇಮಸ್ ಆಗ್ತಾರೆ. ಇದಕ್ಕೆ ಈ ಹುಡುಗಿಯೇ ಸಾಕ್ಷಿ. ಕನ್ನಡ ಸಿನಿಮಾದ ಹಾಡೊಂದನ್ನು ತನ್ನದೇ ದಾಟಿಯಲ್ಲಿ ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾಳೆ. ಈ ವಿಡಿಯೋಗೆ ನೆಟ್ಟಿಗರಿಂದ ಸಖತ್ ಮೆಚ್ಚುಗೆ ವ್ಯಕ್ತವಾಗಿವೆ.
ನ್ನದೇ ದಾಟಿಯಲ್ಲಿ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡನ್ನು ಹಾಡಿದ್ದು, ಒರಿಜಿನಲ್ ಹಾಡೇ ಮರೆತು ಹೋಗುವಂತೆ ಮಾಡಿದ್ದಾಳೆ. ಈ ಮುದ್ದಾದ ಹಾಡಿನ ವಿಡಿಯೋ ಸದ್ಯ ನೆಟ್ಟಿಗರ ಮನಸ್ಸನ್ನು ಗೆದ್ದುಕೊಂಡಿದೆ.
ಈ ವಿಡಿಯೋವನ್ನು ಹಲವಾರು ಬಳಕೆದಾರರು ವೀಕ್ಷಿಸಿದ್ದು, ಈ ಹುಡುಗಿಯ ಕಾನ್ಫಿಡೆನ್ಸ್ ಲೆವೆಲ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಳಕೆದಾರರು ಈಕೆ ಯಾರು ನಕ್ಕರು ತಲೆ ಕೆಡಿಸಿಕೊಂಡಿಲ್ಲ, ಈಕೆಯ ಕಾನ್ಫಿಡೆನ್ಸ್ ಲೆವೆಲ್ ಎಷ್ಟಿದೆ ಎಂದು ತೋರಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಸಾರಿ ನೋಡಿದ್ರು ಬೇಜಾರೇ ಆಗ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.