ವೈರಲ್ ಆಗುತ್ತಿರುವ ಲಿಂಗಾಪುರಂ ಮಕ್ಕಳ ವಿಡಿಯೋ ಕುರಿತು ಎಪಿ ಸಿಎಂಒ ಸ್ಪಷ್ಟನೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ನರಸೀಪಟ್ಟಣಂ ಪುರಸಭೆ ವ್ಯಾಪ್ತಿಯ ಲಿಂಗಾಪುರಂ ಗ್ರಾಮದ ಮಕ್ಕಳ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಮಕ್ಕಳು ವರಹನದಿಯಲ್ಲಿ ಇಳಿದು ತಮ್ಮ ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಮೊರೆ ಇಟ್ಟಿದ್ದರು. ಗ್ರಾಮದಲ್ಲಿ ಐದನೇ ತರಗತಿವರೆಗೆ ಮಾತ್ರ ಶಾಲೆ ಇರುವುದರಿಂದ ಮುಂದಿನ ಓದಿಗಾಗಿ ಬೇರೆ ಕಡೆ ಹೋಗಲು ರಸ್ತೆ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದರು.

ರಾಷ್ಟ್ರೀಯ ಮಾಧ್ಯಮಗಳಲ್ಲೂ ಈ ವಿಡಿಯೋ ಕಾಣಿಸಿಕೊಂಡಿದ್ದು, ಈ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಕಚೇರಿ ಮತ್ತು ಸರ್ಕಾರಿ ವಾಸ್ತವಾಂಶ ಪರಿಶೀಲನೆ ಸಿಬ್ಬಂದಿ ವಿವರಣೆ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಜನರನ್ನು ದಾರಿತಪ್ಪಿಸಲು ವಿಡಿಯೋ ತೆಗೆಯಲಾಗಿದೆ ವಾಸ್ತವವಾಗಿ ಸಿಎಂಒ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಆ ಪ್ರದೇಶದ ರಸ್ತೆಗಳು ಸುಸ್ಥಿತಿಯಲ್ಲಿವೆ ಎಂದು ಹೇಳಿದ್ದಾರೆ.

ರಸ್ತೆ ನಿರ್ಮಾಣಕ್ಕಾಗಿ ಮಕ್ಕಳು ಮನವಿ ಮಾಡುತ್ತಿರುವ ವಿಡಿಯೋ ಕುರಿತು ತನಿಖೆ ನಡೆಸುವಂತೆ ಸಿಎಂಒ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಈ ಬಗ್ಗೆ ತನಿಖೆ ನಡೆಸಲಾಗಿತ್ತು. ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಮಕ್ಕಳನ್ನು ನೀರಿನಲ್ಲಿ ನಿಲ್ಲಿಸಿ ತೆಗೆದಿರುವುದು ಪತ್ತೆಯಾಗಿದೆ. ಅಲ್ಲಿನ ರಸ್ತೆಗಳ ನೈಜ ವೀಡಿಯೋವನ್ನು ಇದೇ ನೋಡಿ ಎಂದು ಸಿಎಂಒ ಟ್ವೀಟ್ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!