ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಮುಂಚಿತವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ವಿರಾಟ್ ಕೊಹ್ಲಿ ತಮ್ಮ ಹೊಸ ನೋಟದಿಂದ ಗಮನ ಸೆಳೆದಿದ್ದಾರೆ. ಆರ್ಸಿಬಿ ತಂಡದ ಅನ್ಬಾಕ್ಸಿಂಗ್ ಕಾರ್ಯಕ್ರಮಕ್ಕೂ ಮುನ್ನ ಕೊಹ್ಲಿ ತಮ್ಮ ಹೇರ್ ಸ್ಟೈಲ್ ಬದಲಿಸಿ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ಇದೀಗ ಕಿಂಗ್ ಕೊಹ್ಲಿಯ ಹೊಸ ಹೇರ್ ಸ್ಟೈಲ್ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿರಾಟ್ನ ಹೊಸ ಲುಕ್ ಆರ್ಸಿಬಿ ಅದೃಷ್ಟವನ್ನೇ ಬದಲಿಸಲಿದೆ ಎಂಬ ಚರ್ಚೆಗಳೂ ನಡೆಯುತ್ತಿದೆ.
ಏಕೆಂದರೆ ಕಿಂಗ್ ಕೊಹ್ಲಿ ಕಳೆದ 16 ಸೀಸನ್ಗಳಲ್ಲಿ ಆರ್ಸಿಬಿ ಪರ ಆಡಿದ್ದಾರೆ. ಆದರೆ ಕಿಂಗ್ ಕೊಹ್ಲಿಗೆ ಐಪಿಎಲ್ ಟ್ರೋಫಿ ಕನಸಾಗಿಯೇ ಉಳಿದಿದೆ. ಹೀಗಾಗಿ ಕೊಹ್ಲಿಯ ಹೊಸ ಲುಕ್ ಆರ್ಸಿಬಿ ಅದೃಷ್ಟವನ್ನೇ ಬದಲಿಸಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಅಂದಹಾಗೆ, ವಿರಾಟ್ ಕೊಹ್ಲಿಗೆ ಹೊಸ ಲುಕ್ ಕೊಟ್ಟಿದ್ದು ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್. ಅನೇಕ ಭಾರತೀಯ ತಂಡದ ಆಟಗಾರರ ಲುಕ್ ಬದಲಾಯಿಸಿರುವ ಆಲಿಮ್ ಈಗ ವಿರಾಟ್ ಕೊಹ್ಲಿ ಅವರನ್ನ ಪವರ್ ಫುಲ್ ಸ್ಟೈಲಿಸ್ಟ್ ಲುಕ್ ಅನ್ನು ನೀಡುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ.