ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೀನ್ಯಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಮೂವರು ತ್ರಿವಳಿ ಸಹೋದರಿಯರು ಒಬ್ಬನೇ ಪುರುಷನನ್ನು ಮದುವೆಯಾಗಿದ್ದಾರೆ.
ಒಬ್ಬನೇ ಪತಿ ಜತೆ ಮೂವರು ಸಹೋದರಿಯರು ಇರಲು ನಿರ್ಧರಿಸಿದ್ದು, ಜಗತ್ತೇ ಆಶ್ಚರ್ಯ ಸೂಚಿಸಿದೆ. ತ್ರಿವಳು ಸಹೋದರಿಯರು ಅನ್ಯೋನ್ಯ ಜೀವನ ನಡೆಸುತ್ತಿದ್ದಾರೆ, ಮುಂದೆ ಬರುವ ಪತಿಯಿಂದ ನಾವು ದೂರವಾಗಬಾರದು ಎನ್ನುವ ಮನಸ್ಥಿತಿ ಸಹೋದರಿಯರಿಗೆ ಇತ್ತು.
ಕೇಟ್, ಈವ್ ಹಾಗೂ ಮೇರಿ ಇದೀಗ ಸ್ಟೀವೋರನ್ನು ವರಿಸಿದ್ದಾರೆ. ಕೇಟ್ ಹಾಗೂ ಸ್ಟೀವೋ ಮೊದಲು ಭೇಟಿ ಮಾಡಿದ್ದು, ಪ್ರೀತಿಸುತ್ತಿದ್ದರು. ಸಹೋದರಿಯರು ನೋಡಲು ಒಂದೇ ರೀತಿ ಇದ್ದು, ಅವರ ಮೇಲೂ ಸ್ಟೀವೋ ಆಕರ್ಷಣೆ ಇದೆ ಎಂದು ಹೇಳಿಕೊಂಡಿದ್ದಾರೆ. ಮೂವರು ಸಹೋದರಿಯರ ಬಳಿ ಬಂದು ಎಲ್ಲರನ್ನು ಮದುವೆಯಾಗುವುದಾಗಿ ಸ್ಟೀವೋ ಹೇಳಿದ್ದಾರೆ. ಎಲ್ಲರೂ ಒಟ್ಟಿಗೇ ಇರಬಹುದು ಎನ್ನುವ ಕಾರಣಕ್ಕೆ ಸಹೋದರಿಯರು ಮದುವೆಗೆ ಒಪ್ಪಿದ್ದಾರೆ.
ಮೂವರು ಪತ್ನಿಯರ ಜತೆ ಸ್ಟೀವೋ ಸುಖವಾಗಿದ್ದಾರಂತೆ, ಯಾವ ಜಗಳ, ಗಲಾಟೆ ಇಲ್ಲದೆ ಎಲ್ಲರನ್ನೂ ಖುಷಿಯಿಂದ ನೋಡಿಕೊಳ್ಳುತ್ತಿದ್ದೇನೆ. ವಾರದ ಒಂದೊಂದು ದಿನ ಒಬ್ಬ ಪತ್ನಿಗಾಗಿ ಮೀಸಲಿಟ್ಟಿದ್ದಾರಂತೆ, ನಮ್ಮ ಜೀವನದಲ್ಲಿ ಇನ್ಯಾರಿಗೂ ಜಾಗ ಇಲ್ಲ, ನಾವು ಹಾಯಾಗಿದ್ದೇವೆ ಎಂದು ಸ್ಟೀವೋ ಹೇಳಿಕೊಂಡಿದ್ದಾರೆ.
ಮೂವರು ಮಹಿಳೆಯರನ್ನು ಏಕಕಾಲಕ್ಕೆ ವರಿಸಿದ್ದಕ್ಕಾಗಿ, ಮೂವರಿಗೂ ಇದರಿಂದ ತೊಂದರೆಯೂ ಇಲ್ಲದ್ದಕ್ಕಾಗಿ, ಯಾವ ಪತ್ನಿಗೂ ನೋವಾಗದಂತೆ ಸ್ಟೀವೋ ನೋಡಿಕೊಳ್ಳುತ್ತಿರುವುದು ನಿಜಕ್ಕೂ ಆಶ್ಚರ್ಯವೇ!