ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ನಾಯಕ , ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
50 ರ ಹರೆಯದ ನಾಯಕ ದೇಬ್ ಅವರು ಶುಕ್ರವಾರ ದೆಹಲಿ ಪ್ರವಾಸಕ್ಕೆ ತೆರಳಿ ಶನಿವಾರ ಬೆಳಿಗ್ಗೆ ಅಗರ್ತಲಾಗೆ ಮರಳಿದ್ದರು.
ಸುದ್ದಿಯನ್ನು ನಾವು ಆಶ್ಚರ್ಯದಿಂದ ಸ್ವೀಕರಿಸಿದ್ದೇವೆ. ಅವರಿಗೆ ಏನು ಪ್ರೇರೇಪಿಸಿತು ಎಂದು ತಿಳಿದಿಲ್ಲ. ಆದರೆ ನಿಸ್ಸಂಶಯವಾಗಿ ಅವರು ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಚರ್ಚೆ ನಡೆಸಿದ್ದಾರೆ. ಪಕ್ಷವು ಕೆಲವು ಯೋಜನೆಗಳನ್ನು ಹೊಂದಿರಬಹುದು ಮತ್ತು ಅದು ಪಕ್ಷಕ್ಕೆ ಒಳ್ಳೆಯದು ಎಂದು ನಮಗೆ ವಿಶ್ವಾಸವಿದೆ ಎಂದು ದೇಬ್ ಅವರ ಸಂಪುಟದ ಸಚಿವರೊಬ್ಬರು ಹೇಳಿದ್ದಾರೆ.