ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್ ನೆಚ್ಚಿನ ನಾಯಕಿ ತ್ರಿಷಾ ಸಿನಿಮಾ ರಂಗಕ್ಕೆ ಕಾಲಿಟ್ಟು 20 ವರ್ಷ ದಾಟಿದೆ. ಆದರೂ ತಾವು ಯಾವ ಹೊಸ ನಾಯಕಿಯರಿಗೂ ಕಮ್ಮಿ ಇಲ್ಲ ಎನ್ನುವಂತೆ ಇಂದಿಗೂ ಮಿಂಚುತ್ತಿದ್ದಾರೆ.
ತ್ರಿಷಾ ನಟನೆಯಲ್ಲಿ ಈ ವರ್ಷ ಮಾತ್ರ 3 ಚಿತ್ರಗಳು ಬಿಡುಗಡೆಯಾಗಿದ್ದು, ಫೆಬ್ರವರಿಯಲ್ಲಿ ಅಜಿತ್‌ಗೆ ಜೋಡಿಯಾಗಿ ತ್ರಿಷಾ ನಟಿಸಿದ ವಿಡಾಮುಯರ್ಚಿ ಸಿನಿಮಾ ಹೀನಾಯವಾಗಿ ಸೋತಿತು.ಈಗ ಈ ಸೋಲಿನಿಂದ ಕಮ್‌ಬ್ಯಾಕ್ ನೀಡುವ ರೀತಿಯಲ್ಲಿ ನಟಿ ತ್ರಿಷಾ ಮತ್ತು ಅಜಿತ್ ಮತ್ತೆ ಜೋಡಿಯಾಗಿ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ ನಟಿಸಿದ್ದಾರೆ.
ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾಗೆ ಅಜಿತ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಚಿತ್ರತಂಡ ಸಂತಸಗೊಂಡಿದೆ.
ಆದರೆ ಈ ಚಿತ್ರದ ಬಿಡುಗಡೆಯ ನಂತರ ನಟಿ ತ್ರಿಷಾ ತೀವ್ರ ಕೋಪಗೊಂಡಿದ್ದಾರಂತೆ. ಈ ಕೋಪಕ್ಕೆ ಕಾರಣ ನಯನತಾರಾ ಅಭಿಮಾನಿಗಳಂತೆ. ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ತ್ರಿಷಾ ಅವರ ನಟನೆಯನ್ನು ಹೊಗಳುವ ರೀತಿಯಲ್ಲಿ ಅವರ ಅಭಿಮಾನಿಗಳು, ಒಂದೇ ಒಂದು ಲೇಡಿ ಸೂಪರ್‌ಸ್ಟಾರ್ ಇದ್ದಾರೆ.. ಅದು ನಮ್ಮ ತ್ರಿಷಾ ಮಾತ್ರ ಎಂದು ಪೋಸ್ಟ್ ಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ನಯನತಾರಾ ಅಭಿಮಾನಿಗಳು, ಗುಡ್ ಬ್ಯಾಡ್ ಅಗ್ಲಿಯಲ್ಲಿ ತ್ರಿಷಾ ನಟನೆ ಕಳಪೆ ಎಂದು ಟೀಕಿಸಿದ್ದಲ್ಲದೆ, 20 ವರ್ಷಗಳಿಂದ ಸಿನಿಮಾದಲ್ಲಿ ನಟಿಸಿದರೂ ಸ್ವಂತ ಧ್ವನಿಯಲ್ಲಿ ಡಬ್ಬಿಂಗ್ ಮಾಡಲು ಬರುವುದಿಲ್ಲ. ನಟನೆಯೂ ಅವರಿಗಿಲ್ಲ ಎಂದು ರಿಪ್ಲೈ ನೀಡಿದ್ದಾರೆ. ಇದರಿಂದ ಇಬ್ಬರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಜಗಳ ನಡೆದಿದೆ.