ನಟಿ ಮಹಾಲಕ್ಷ್ಮಿ ಪತಿ ರವೀಂದರ್ ಗೆ ಸಂಕಷ್ಟ: ವಂಚನೆ ಕೇಸ್​ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravindra Chandrasekaran) ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ ಮದುವೆ ವಿಚಾರ ಎಲ್ಲರಿಗೂ ಗೊತ್ತೇ ಇದೆ .

ಇವರ ಮದುವೆ ವಿಚಾರಕ್ಕೆ ಬಹಳಷ್ಟು ಟ್ರೋಲ್​ ಆಗುತ್ತಲೇ ಇದ್ದಾರೆ. ಈ ಜೋಡಿ ಏನೇ ಮಾಡಲಿ ಅದರ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ.

ಇದೀಗ ರವೀಂದರ್​ ಅವರಿಗೆ ಶಾಕ್​ ಎದುರಾಗಿದೆ. ಅದೇನೆಂದರೆ ವಂಚನೆ ಆರೋಪ ದಾಖಲಾಗಿದ್ದು, ಚೆನ್ನೈ ಕೇಂದ್ರ ಅಪರಾಧ ವಿಭಾಗ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ರವೀಂದರ್ ಚಂದ್ರಶೇಖರ್ ವಿರುದ್ಧ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. 15 ಲಕ್ಷ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಮಹಾಲಕ್ಷ್ಮಿ (Mahalakshmi) ಪತಿ ರವೀಂದರ್ ಚಂದ್ರಶೇಖರ್ ಪೊಲೀಸ್ ಠಾಣೆಗೆ ಹಾಜರಾಗಿ ವಿವರಣೆ ನೀಡಿದ್ದಾರೆ.

ಅಷ್ಟಕ್ಕೂ ಇವರ ಮೇಲೆ ಕೇಸ್​ ಹಾಕಿರುವವರು ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ವಿಜಯ್​ ಎಂಬುವವರು. ಇವರು ನೀಡಿರುವ ದೂರಿನ ಆಧಾರದ ಮೇಲೆ ರವೀಂದರ್​ ವಿರುದ್ಧ ಪ್ರಕರಣ ದಾಖಲಾಗಿದೆ.

15 ಲಕ್ಷ ರೂಪಾಯಿಯ ವಂಚನೆಗೆ ಕಾರಣವಾಗಿರುವುದು ವಿಜಯ್​ ಅವರು ನೀಡಿರುವ ದೂರಿನ ಆಧಾರದ ಮೇಲೆ ವಿಜಯ್​ ದೂರಿನ ಪ್ರಕಾರ ಅವರು ಭಾರೀ ಮೊತ್ತದ ಹಣವನ್ನು ಸಿನಿಮಾ ಪ್ರಾಜೆಕ್ಟ್​ (Cinema Project) ಒಂದಕ್ಕೆ ರವೀಂದರ್​ ಜತೆ ಸೇರಿ ಹೂಡಿಕೆ ಮಾಡಿದ್ದರಂತೆ. ಆದರೆ, ರವಿಂದರ್​ ಅವರ ಸಿನಿಮಾದ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿ ನೀಡಿದೆ, ತಮ್ಮ ಬದ್ಧತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಇದರಿಂದ ಮೋಸ ಹೋಗಿದ್ದೇನೆ ಎಂದು ಭಾವಿಸಿ ರವೀಂದರ್​ ವಿರುದ್ಧ ದೂರು ನೀಡಿದ್ದಾರೆ. ಸಾಲವನ್ನು ವಾಪಸ್​ ನೀಡುವಂತೆ ಹಲವು ಬಾರಿ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಆದ್ದರಿಂದ ದೂರು ದಾಖಲಿಸಿರುವುದಾಗಿ ವಿಜಯ್​ ಹೇಳಿದ್ದಾರೆ.

ದೂರನ್ನು ಆನ್​ಲೈನ್​ ಮೂಲಕ ದಾಖಲು ಮಾಡಲಾಗಿದೆ. ದೂರನ್ನು ಪಡೆದುಕೊಂಡಿರುವ ಚೆನ್ನೈ ಕೇಂದ್ರ ಅಪರಾಧ ವಿಭಾಗ ರವೀಂದರ್​ ಅವರನ್ನು ವಿಚಾರಣೆಗೆ ಬರುವಂತೆ ಕರೆದಿದೆ. ರವೀಂದರ್ ಅವರು ತನಿಖೆಗೆ ಹಾಜರಾಗಿ, ಅಧಿಕಾರಿಗಳೊಂದಿಗೆ ಸಹಕರಿಸಿದ್ದಾರೆ ಮತ್ತು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಎರಡೂ ಕಡೆ ಮಾಡಿರುವ ಆರೋಪಗಳ ಸಿಂಧುತ್ವವನ್ನು ನಿರ್ಧರಿಸಲು ಇಬ್ಬರೂ ಪ್ರಸ್ತುತಪಡಿಸಿದ ಸಾಕ್ಷ್ಯಗಳು, ಹೇಳಿಕೆಗಳು ಮತ್ತು ದಾಖಲೆಗಳನ್ನು ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!