ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರಕಾರ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಆಟೋ ಚಾಲಕರು ಪ್ರಯಾಣಿಕರು ಇಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಇದನ್ನ ಅರಿತ ಸರಕಾರ ನೆರವಿದೆ ಧಾವಿಸಿದೆ.
ವಿಧಾನ ಪರಿಷತ್ತಿನಲ್ಲಿ ಪ್ರಶ್ತೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಶಕ್ತಿ ಯೋಜನೆಯಿಂದಾಗಿ ಆಟೋರ ರಿಕ್ಷಾ ಚಾಲಕರಿಗೆ ಸಮಸ್ಯೆ ಉಂಟಾಗಿದೆ. ಉಚಿತ ಪ್ರಯಾಣದ ನಂತ್ರ ಆಟೋ ಚಾಲಕರು ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಅವರ ನೆರವಿಗೆ ಸರ್ಕಾರ ಧಾವಿಸಬೇಕು ಎಂದರು.
ಈ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಜೂನ್.11ರಂದು ಶಕ್ತಿ ಯೋಜನೆ ಶುರುವಾಗಿದ್ದಾಗಿನಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಯೋಜನೆ ಜಾರಿಯಾಗಿ ಒಂದು ತಿಂಗಳು ಸಮೀಪಿಸುತ್ತಿದೆ. ಆಟೋ ಚಾಲಕರಿಗೆ ಆಗಿರುವಂತ ಸಮಸ್ಯೆ ಬಗ್ಗೆ ಚರ್ಚಿಸುತ್ತೇವೆ. ಈವರೆಗೆ ಆ ಬಗ್ಗೆ ಸಮಸ್ಯೆ ಏಳಿಕೊಂಡು ಯಾವುದೇ ಆಟೋ ಚಾಲಕರು ಬಂದಿಲ್ಲ. ಆಟೋದವರಿಗೆ ಸಮಸ್ಯೆ ಆದ್ರೇ ಸರ್ಕಾರ ಪರಿಹಾರ ಕೊಡಲಿದೆ ಎಂದು ಭರವಸೆ ನೀಡಿದರು.