ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯರಾತ್ರಿ ಮಿರ್ಜಾಪುರ ಜಿಲ್ಲೆಯ ಪ್ರಯಾಗ್‌ರಾಜ್-ವಾರಣಾಸಿ ಹೆದ್ದಾರಿಯಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಭಾನು ಪ್ರತಾಪ್ (25), ವಿಕಾಸ್ ಕುಮಾರ್ (20), ಅನಿಲ್ ಕುಮಾರ್ (35), ಸೂರಜ್ ಕುಮಾರ್ (22), ಸನೋಹರ್ (25), ರಾಕೇಶ್ ಕುಮಾರ್ (25), ಪ್ರೇಮ್ ಕುಮಾರ್ (40), ರಾಹುಲ್ ಕುಮಾರ್ (26) ಎಂದು ಗುರುತಿಸಲಾಗಿದೆ. ನಿತಿನ್ ಕುಮಾರ್ (22) ಮತ್ತು ರೋಷನ್ (27) ಮೃತರ ಗುರುತು ಇದುವರೆಗೆ ಪತ್ತೆಯಾಗಿಲ್ಲ.
ಬೆಳಗಿನ ಜಾವ 1 ಗಂಟೆ ಸುಮಾರಿಗೆ ಭದೋಹಿಯಲ್ಲಿ ಮೇಲ್ಛಾವಣಿ ಕಾಮಗಾರಿ ಮುಗಿಸಿ ವಾರಣಾಸಿಯ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾಗ ಜಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಮಿರ್ಜಾಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ), ಅಭಿನಂದನ್ ಮಾಹಿತಿ ನೀಡಿದ್ದಾರೆ.
ಹೆದ್ದಾರಿಯಲ್ಲಿ ಕಚ್ವಾ ಬಳಿ ವೇಗವಾಗಿ ಬಂದ ಟ್ರಕ್ ಹಿಂದಿನಿಂದ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದರು. ಮೃತರೆಲ್ಲರೂ ವಾರಣಾಸಿಯ ಮಿರ್ಜಾಮುರಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಗಳ ನಿವಾಸಿಗಳು ಎಂದು ತಿಳಿಸಿದ್ದಾರೆ.