ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ನೌಕರರು ಚೀನಿಯರ ಜೊತೆ ಲವ್ವಿ ಡವ್ವಿ ಮಾಡೋದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಗ್ ನೋ ಹೇಳಿದ್ದಾರೆ.
ಅಮೆರಿಕದ ನೌಕರರು ಚೀನಿಯರ ಜೊತೆ ಯಾವುದೇ ರೀತಿಯ ಲವ್, ಲೈಂಗಿಕ ಸಂಬಂಧ ಹೊಂದುವುದನ್ನು ಅಮೆರಿಕ ಸರ್ಕಾರ ನಿಷೇಧಿಸಿದೆ. ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚೀನಾದಲ್ಲಿರುವ ಅಮೆರಿಕದ ನೌಕರರು ಚೀನಿಯರೊಂದಿಗೆ ಲವ್, ಡೇಟ್, ಲೈಂಗಿಕ ಸಂಬಂಧ ಇಟ್ಟುಕೊಳ್ಳುವಂತಿಲ್ಲ ಎಂದು ಟ್ರಂಪ್ ಸರ್ಕಾರ ಆದೇಶಿಸಿದೆ. ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರು, ಭದ್ರತಾ ಅನುಮತಿಗಳನ್ನು ಹೊಂದಿರುವ ಗುತ್ತಿಗೆದಾರರಿಗೂ ಇದು ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಚೀನಾದಿಂದ ನಿರ್ಗಮಿಸುವ ಮೊದಲು ಯುಎಸ್ ರಾಯಭಾರಿಯಾಗಿದ್ದ ನಿಕೋಲಸ್ ಬರ್ನ್ಸ್ ಅವರು ಜನವರಿಯಲ್ಲಿ ಈ ಆದೇಶವನ್ನು ಜಾರಿಗೆ ತಂದಿದ್ದಾರೆ ಎನ್ನಲಾಗಿದೆ. ಬೀಜಿಂಗ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ಗುವಾಂಗ್‌ಝೌ, ಶಾಂಘೈ, ಶೆನ್ಯಾಂಗ್ ಮತ್ತು ವುಹಾನ್‌ನಲ್ಲಿರುವ ಕಾನ್ಸುಲೇಟ್‌ಗಳು ಹಾಗೂ ಹಾಂಗ್ ಕಾಂಗ್‌ನಲ್ಲಿರುವ ಕಾನ್ಸುಲೇಟ್‌ಗಳ ಸಿಬ್ಬಂದಿಗೆ ಈ ನೀತಿ ಅನ್ವಯಿಸುತ್ತದೆ. ಚೀನಾದ ಹೊರಗೆ ಬೀಡುಬಿಟ್ಟಿರುವ ಅಮೆರಿಕದ ಸಿಬ್ಬಂದಿ ಅಥವಾ ಈಗಾಗಲೇ ಚೀನಾದ ನಾಗರಿಕರೊಂದಿಗೆ ಸಂಬಂಧ ಹೊಂದಿರುವವರಿಗೆ ವಿನಾಯಿತಿ ನೀಡಬಹುದು ಎಂದು ವರದಿ ತಿಳಿಸಿದೆ.