March 21, 2026
Saturday, March 21, 2026
spot_img

ಇರಾನ್ ಮೇಲೆ ದಾಳಿ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದ ಟ್ರಂಪ್: ಸರ್ಕಾರ ಉರುಳಿಸುವುದೇ ನಮ್ಮ ಗುರಿ ಎಂದ ದೊಡ್ಡಣ್ಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ಅವರ ನೌಕಾಪಡೆಯನ್ನು ನಾಶಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್, ಸೇನೆ, ನೌಕಾಪಡೆ ಮತ್ತು ಕ್ಷಿಪಣಿ ತಾಣಗಳನ್ನು ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದ ಟ್ರಂಪ್ , ಇರಾನಿಯನ್ನರು ತಮ್ಮ ಸರ್ಕಾರವನ್ನು ಉರುಳಿಸಬೇಕು ಎಂದು ಕರೆ ನೀಡಿದರು.

ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿಯನ್ನು ನಾಶಮಾಡುವುದು ಮತ್ತು 1979ರ ಕ್ರಾಂತಿಯ ನಂತರ ಅಧಿಕಾರದಲ್ಲಿರುವ ಸರ್ಕಾರವನ್ನು ಉರುಳಿಸುವುದು ನಮ್ಮ ಗುರಿಯಾಗಿದೆ. ನಾವು ಅವರ ಕ್ಷಿಪಣಿಗಳನ್ನು ನಾಶಮಾಡಲಿದ್ದೇವೆ ಮತ್ತು ಅವರ ಕ್ಷಿಪಣಿ ಉದ್ಯಮವನ್ನು ನೆಲಕ್ಕೆ ಉರುಳಿಸುತ್ತೇವೆ. ನಾವು ಅವರ ನೌಕಾಪಡೆಯನ್ನು ನಾಶಮಾಡಲಿದ್ದೇವೆ ಎಂದು ಟ್ರಂಪ್ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇರಾನ್ ಸರ್ಕಾರದ ವಿರುದ್ಧ ದಂಗೆ ಏಳುವಂತೆ ಅಲ್ಲಿನ ಜನರಿಗೆ ಕರೆ ನೀಡಿದ್ದು, ನಿಮ್ಮ ಸ್ವಾತಂತ್ರ್ಯದ ಸಮಯ ಹತ್ತಿರದಲ್ಲಿದೆ ಎಂದು ಹೇಳಿದ್ದಾರೆ.

ಇರಾನ್ ಮೇಲೆ ನಡೆಸುತ್ತಿರುವ ದಾಳಿಗೆ “ಆಪರೇಷನ್ ಎಪಿಕ್ ಫ್ಯೂರಿ” ಎಂದು ಅಮೆರಿಕ ಹೆಸರಿಟ್ಟಿದ್ದು, ಟೆಹ್ರಾನ್ ಸೇರಿದಂತೆ ಹಲವು ಕಡೆ ಬಾಂಬ್ ಗಳನ್ನು ಸ್ಫೋಟಿಸಲಾಗುತ್ತಿದೆ. ಇರಾನ್ ಮೇಲಿನ ಈ ದಾಳಿ ಒಂದು ಪ್ರಮುಖ ಸೇನಾ ಕಾರ್ಯಾಚರಣೆಯಾಗಿದೆ ಎಂದ ಪೆಂಟಗನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !