October 16, 2026
Friday, October 16, 2026
spot_img

ಗ್ಯಾಸ್ ಸಿಲಿಂಡರ್ ಅಭಾವಕ್ಕೆ ರಾಜ್ಯ ರಾಜಧಾನಿಯೂ ಕಂಗಾಲು: ಹೊಟೇಲ್ ಉದ್ಯಮಕ್ಕೆ ಬರೋಬ್ಬರಿ 150 ಕೋಟಿ ರೂ ನಷ್ಟ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಹೆಚ್ಚುತ್ತಿದ್ದು, ಹೊಟೇಲ್ ಉದ್ಯಮಗಳು ಸಂಕಷ್ಟಕ್ಕೆ ಒಳಗಾಗಿವೆ. ಕಳೆದ ಕೆಲವು ದಿನಗಳಲ್ಲಿ ಬೆಂಗಳೂರಿಲ್ಲಿಯೇ ಬರೋಬ್ಬರಿ 150 ಕೋಟಿ ರೂ ನಷ್ಟವಾಗಿದೆ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.

ಸದಾ ಜನರಿಂದ ಬ್ಯುಸಿ ಇರುತ್ತಿದ್ದ ಹೊಟೇಲ್ ಗಳು ಇಂದು ಜನರು ಬಂದರೂ ಸರಿಯಾದ ಆಹಾರ ನೀಡಲು ಆಗದೆ ಕಂಗಾಲಾಗಿದೆ . ಬೆಂಗಳೂರಿನಲ್ಲಿ ಕಳೆದ ವಾರ ಹೊಟೇಲ್ ​​ಗಳಿಗೆ 100 ಕೋಟಿ ರೂ ನಷ್ಟವಾಗಿದ್ದು, ಈ ವಾರ 50 ಕೋಟಿ ರೂ ನಷ್ಟವಾಗಿದೆ. ಹೀಗಾಗಿ ಕಳೆದೆರಡು ವಾರದಲ್ಲಿ ಹೊಟೇಲ್ ಉದ್ಯಮಕ್ಕೆ 150 ಕೋಟಿ ರೂ ನಷ್ಟವಾಗಿದೆ ಎಂದು ರಾವ್ ತಿಳಿಸಿದರು.

ಇನ್ನು ಗ್ಯಾಸ್​ ಸಿಲಿಂಡರ್​​​ಗಳ ಅಭಾವದಿಂದಾಗಿ ಹೊಟೇಲ್​​ ಮಾಲೀಕರು ಸೌದೆ ಒಲೆ ಮೊರೆ ಹೋಗಿದ್ದು, ಅಲ್ಲಿಯೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಎಲ್ಲಡೆ ಕಟ್ಟಿಗೆಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಅಲ್ಲಿಯೂ ಮಾರಾಟಗಾರರರು ಬೆಲೆ ಹೆಚ್ಚಿಸಿದ್ದು, ಇದರಿಂದ ದುಪ್ಪಟ್ಟು ಹಣ ನೀಡಿ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿನ ಕದನ ಹೊಟೇಲ್ ಉದ್ಯಮಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ ಎಂದು ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

Must Read