ಭಾರತ-ಪಾಕಿಸ್ತಾನ ನ ಕದನ ವಿರಾಮಕ್ಕೆ ಟ್ರಂಪ್ ಕಾರಣ: ಮತ್ತೆ ಅಮೆರಿಕದಿಂದ ಅದೇ ರಾಗಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಇಷ್ಟು ದಿನ ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಅಮೆರಿಕ ಕಾರಣ ಎಂದು ಟ್ರಂಪ್ ಹೇಳುತ್ತಿದ್ದರೆ , ಇದೀಗ ಯುದ್ಧ ನಿಲ್ಲಿಸಿದ್ದು ನಾವೇ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಪರಮಾಣು ಸಶಸ್ತ್ರ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿತು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.

EWTN ಮಾಧ್ಯಮದ ಸಂದರ್ಶನದ ವೇಳೆ ಮಾತನಾಡಿರುವ ಮಾರ್ಕೊ ರುಬಿಯೊ , ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕುರಿತು ಮಾತನಾಡಿದರು.

ಟ್ರಂಪ್ ಅವರು, ಶಾಂತಿಗೆ ಬದ್ಧರಾಗಿದ್ದು, ಶಾಂತಿಯ ಅಧ್ಯಕ್ಷರೂ ಆಗಿದ್ದಾರೆ. ಹಾಗಾಗಿ, ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ಎದುರಾದಾಗ ಮಧ್ಯಸ್ಥಿಕೆ ವಹಿಸಿ ಎರಡು ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಡುವಂತೆ ಮಾಡಿದರು ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಧ್ಯಸ್ಥಿಕೆ ವಹಿಸಿದ ರಾಷ್ಟ್ರಗಳ ಕುರಿತಂತೆಯೂ ಮಾತನಾಡಿರುವ ಅವರು, ಇತ್ತೀಚೆಗೆ ಕಾಂಬೋಡಿಯಾ –ಥಾಯ್ಲೆಂಡ್, ಅಜರ್‌ಬೈಜಾನ್– ಅರ್ಮೇನಿಯಾ ಸೇರಿದಂತೆ, 30 ವರ್ಷಗಳಿಂದ ನಡೆಯುತ್ತಿರುವ ಡಿಆರ್‌ಸಿ (ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ)-ರುವಾಂಡಾ ನಡುವೆ ಶಾಂತಿ ಸ್ಥಾಪಿಸಿ ಕದನ ವಿರಾಮಕ್ಕೆ ಸಹಿ ಹಾಕಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!