ದುಷ್ಟರಿಂದ ರಕ್ಷಿಸಿಕೊಳ್ಳಲು ಅಮೆರಿಕನ್ನರಿಗೆ ಗನ್‌ ಬೇಕು ಎಂದ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಟೆಕ್ಸಾಸ್‌ ನ ಶಾಲೆಯ ಮಾರಣ ಹೋಮದ ನಂತರ ಅಮೆರಿಕದಲ್ಲಿ ಶಸ್ತ್ರಾಸ್ತ್ರ ಕಾಯಿದೆಯ ಕುರಿತು ಎದ್ದಿರುವ ಚರ್ಚೆಗೆ ಮಾಜಿ ಅಧ್ಯಕ್ಷ ಟ್ರಂಪ್‌ ಪ್ರತಿಕ್ರಿಯಿಸಿದ್ದು ದುಷ್ಟರಿಂದ ರಕ್ಷಿಸಿಕೊಳ್ಳಲು ಅಮೆರಿಕನ್ನರಿಗೆ ಗನ್‌ ಅಗತ್ಯವಾಗಿದೆ ಎಂದಿದ್ದಾರೆ.

ಟೆಕ್ಸಾಸ್‌ನ ರಾಜಧಾನಿ ಹೂಸ್ಟನ್‌ನಲ್ಲಿ ನ್ಯಾಷನಲ್ ರೈಫಲ್ ಅಸೋಸಿಯೇಷನ್ ​​(NRA) ಕಾರ್ಯಕ್ರಮದ ಸಂದರ್ಭದಲ್ಲಿಮಾತನಾಡಿರುವ ಟ್ರಂಪ್‌ “ದುಷ್ಟರಿದ್ದಾರೆ ಅಂದರೆ ನಾಗರಿಕರನ್ನು ನಿಶ್ಯಸ್ತ್ರಗೊಳಿಸಬಾರದು. ಬದಲಾಗಿ ಅವರನ್ನು ಶಸ್ತ್ರಸಜ್ಜಿತಗೊಳಿಸಬೇಕು. ಕಾನೂನು ಪಾಲಿಸುವ ನಾಗರಿಕರಿಗೆ ದುಷ್ಟರ ವಿರುದ್ಧ ರಕ್ಷಿಸಿಕೊಳ್ಳಲು ಗನ್‌ ಗಳು ಅಗತ್ಯವಾಗಿದೆ” ಎಂದಿದ್ದಾರೆ.

“ಡೆಮಾಕ್ರೆಟಿಕ್‌ ರಿಪಬ್ಲಿಕನ್‌ ಎಂಬುದನ್ನು ಬಿಟ್ಟು ಶಾಲೆಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಲು ನಾವೆಲ್ಲರೂ ಒಂದಾಗಬೇಕು. ಗನ್‌ ಗಳನ್ನು ನಿಷೇಧಿಸುವ ಬದಲು ನಮಗೆ ಬೇಕಾಗಿರುವುದು ಶಾಲೆಗಳಲ್ಲಿ ಭದ್ರತಾ ತಪಾಸಣೆ, ಎಲ್ಲರೂ ಒಂದಾಗಿ ಈಕುರಿತು ಗಮನ ಹರಿಸಬೇಕು” ಎಂದು ಟ್ರಂಪ್‌ ಅಭಿಪ್ರಾಯ ಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!