ಫಿಲಿಪೈನ್ಸ್, ಇರಾಕ್ ಸಹಿತ 6 ದೇಶಕ್ಕೆ ಶಾಕ್ ನೀಡಿದ ಟ್ರಂಪ್: ಸರಕುಗಳ ಮೇಲೆ 30% ಸುಂಕ ಘೋಷಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಲ್ಜೀರಿಯಾ, ಬ್ರೂನಿ, ಇರಾಕ್, ಲಿಬಿಯಾ, ಮೊಲ್ಡೊವಾ ಮತ್ತು ಫಿಲಿಪೈನ್ಸ್ ಸಹಿತ 6 ದೇಶಕ್ಕೆ ಮೇಲೆ ಶೇ.30ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕಾ ಘೋಷಿಸಿದೆ.

‘ನಾವು ವ್ಯಾಪಾರಕ್ಕೆ ಸಂಬಂಧಿಸಿದ ಕನಿಷ್ಠ 6 ದೇಶಗಳನ್ನು ನಾಳೆ ಬೆಳಿಗ್ಗೆ ಬಿಡುಗಡೆ ಮಾಡುತ್ತೇವೆ, ಮಧ್ಯಾಹ್ನ ಹೆಚ್ಚುವರಿ ಸಂಖ್ಯೆಯ ದೇಶಗಳನ್ನ ಬಿಡುಗಡೆ ಮಾಡಲಾಗುತ್ತದೆ. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಜೀರಿಯಾದ ಮೇಲೆ 30%, ಬ್ರೂನಿ ಮೇಲೆ 25%, ಇರಾಕ್ ಮೇಲೆ 30%, ಲಿಬಿಯಾದ ಮೇಲೆ 30%, ಫಿಲಿಪೈನ್ಸ್ ಮೇಲೆ 25% ಮತ್ತು ಮೊಲ್ಡೊವಾ ಮೇಲೆ 25% ಸುಂಕ ಘೋಷಿಸಿದ್ದಾರೆ.

ಒಂದು ದಿನದ ಹಿಂದೆ, ಟ್ರಂಪ್ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಸರಕುಗಳ ಮೇಲೆ 10% ಸುಂಕ ವಿಧಿಸುವ ಹೊಸ ಯೋಜನೆ ಘೋಷಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!