ಬ್ರಿಕ್ಸ್‌ ರಾಷ್ಟ್ರಗಳ ಜೊತೆ ಸೇರ್ಕೊಂಡ್ರೆ 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೆ ಜಾಗತಿಕ ಆರ್ಥಿಕತೆಗೂ ಹೊಸ ಆತಂಕ ತಂದಿದ್ದಾರೆ. ತಮ್ಮ `’ಟ್ರೂತ್‌ ಸೋಷಿಯಲ್‌ ಮೀಡಿಯಾ’ ಪ್ಲಾಟ್‌ಫಾರ್ಮ್‌ ಮೂಲಕ ಟ್ರಂಪ್‌ ಅವರು ನೀಡಿರುವ ಹೊಸ ಎಚ್ಚರಿಕೆಯಲ್ಲಿ, ಬ್ರಿಕ್ಸ್‌ (BRICS) ಒಕ್ಕೂಟದ ಜೊತೆ ಹೊಂದಾಣಿಕೆಗೆ ಬರುವ ಯಾವುದೇ ದೇಶಗಳಿಗೆ 10% ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ ಎಂದು ಘೋಷಿಸಿದ್ದಾರೆ. ಇದೊಂದು ಎಚ್ಚರಿಕೆ ಎಂದು ಅವರು ಬಣ್ಣಿಸಿದ್ದು, ಈ ಕ್ರಮಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಬ್ರಿಕ್ಸ್ ಶೃಂಗಸಭೆಗೂ ಎಚ್ಚರಿಕೆ
ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯ ಸಮಯದಲ್ಲೇ ಈ ಎಚ್ಚರಿಕೆಯ ಪ್ರಕಟಣೆ ಬಂದಿರುವುದು ಗಮನ ಸೆಳೆಯುತ್ತಿದೆ. ಈ ಜಾಗತಿಕ ವೇದಿಕೆಯಲ್ಲಿ ಭಾರತ ಸೇರಿದಂತೆ ಪ್ರಮುಖ ಆರ್ಥಿಕ ಶಕ್ತಿಗಳು ಭಾಗಿಯಾಗಿರುವಾಗಲೇ ಟ್ರಂಪ್ ಅವರ ಪೋಸ್ಟ್ ಬಂದಿರುವುದು, ಇದನ್ನು ರಾಜಕೀಯ ಸಮೀಕರಣಗಳಿಗೂ ಸಂಬಂಧಿಸಿದ ತಿರುವು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳು ಮುಂದುವರಿದಿರುವ ನಡುವೆಯೇ ಟ್ರಂಪ್‌ ಅವರಿಂದ ಈ ರೀತಿಯ ಹೇಳಿಕೆ ಬಂದಿದ್ದು, ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

2022 ರಲ್ಲಿ ರಷ್ಯಾ ಬ್ರಿಕ್ಸ್ ಕರೆನ್ಸಿಯ ವಿಚಾರ ಪ್ರಸ್ತಾಪಿಸಿದ ನಂತರ, ಈ ಕುರಿತ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ತೀವ್ರಗೊಂಡಿವೆ. ಬ್ರೆಜಿಲ್‌, ರಷ್ಯಾ, ಚೀನಾ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಮ್ಮದೇ ನಾಣ್ಯವ್ಯವಸ್ಥೆಯೊಂದಿಗೆ ಇದ್ದರೂ, ಬ್ರಿಕ್ಸ್ ಒಕ್ಕೂಟ ಒಟ್ಟಾರೆ ಒಂದು ಸಾಮಾನ್ಯ ಕರೆನ್ಸಿಯನ್ನು ತರಲು ಯತ್ನಿಸುತ್ತಿದೆ. ಇದರಿಂದ ಡಾಲರ್‌ ನಿಗಾವನ್ನು ಮುರಿಯಬಹುದು ಎಂಬ ಭಾವನೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!